ಕಾಂಗ್ರೆಸ್ ಮುಖಂಡನ ಕಛೇರಿಯಲ್ಲಿ ಯುವಕ ಅನುಮಾನಾಸ್ಪದ ಸಾವು.ಕುಟುಂಬಸ್ಥರ ಆಕ್ರಂದನ.
ಹುಬ್ಬಳ್ಳಿ:- ಇಂದು ಸಾಯಂಕಾಲ ಹುಬ್ಬಳ್ಳಿಯ ಲಕ್ಷ್ಮೀ ಕಾಂಪ್ಲೆಕ್ಸನಲ್ಲಿರುವ ಕಾಂಗ್ರೆಸ್ ಮುಖಂಡ ಗೌಡಪ್ಪಗೌಡ.ಪಾಟೀಲ ಅವರ ಕಛೇರಿಯಲ್ಲಿ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಮಹೇಶ ಎಂದು ಗುರುತಿಸಲಾಗಿದೆ.ಹುಬ್ಬಳ್ಳಿಯ ಗೌಡಪ್ಪಗೌಡ ಪಾಟೀಲ ಅವರ ಸ್ಟೋನ್ ಕ್ರಷರ್ ಕಛೇರಿ ಇದ್ದು ಮ್ರತ ಯುವಕ ಅವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಎದೆ ನೋವು ಕಾಣಿಸಿಕೊಂಡಿತ್ತು.ಈಗ ಹ್ರದಯಾಘಾತವಾಗಿದೆ ಎಂದು ಕಟ್ಟುಕಥೆ ಕಟ್ಟಿದ್ದಾರೆ ಎನ್ನಲಾಗಿದೆ.ಯುವಕನ ಸಾವಿನ ಹಿನ್ನೆಲೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣ ಹುಬ್ಬಳ್ಳಿ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೋಲೀಸರು ಸರಿಯಾಗಿ ತನಿಖೆ ಮಾಡಿ ಮ್ರತ ಯುವಕನ ಕುಟುಂಬಕ್ಕೆ ನ್ಯಾಯಾ ದೊರಕಿಸಿ ಕೊಡಬೇಕಿದೆ.
ಉದಯ ವಾರ್ತೆ ಹುಬ್ಬಳ್ಳಿ