ನಮ್ಮನ್ನ ಹಿಡ್ಕೊಂಡ್ ಅಲ್ಲಾಡಿದ್ರೆ ಹೆಂಗ್ ರೀ ಆ ಜೋಶಿಗೆ ಒಂದ್ ಮಾತನ್ನೂ ಕೇಳಲ್ಲ ನೀವು ಎಂದ ಸಿಎಂ.
ಹುಬ್ಬಳ್ಳಿ:-ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಮುನ್ನ ರೈತ ಸಂಘಟನೆಯ ಮನವಿ ಸ್ವೀಕರಿಸುತ್ತಾ ರೈತ ಮುಖಂಡರಿಗೆ ನಿಮಗೆ ಒಳ್ಳೆ ಮಿನಿಸ್ಟರ್ ಕೊಟ್ಟಿದ್ದೇವೆ ಇನ್ನೇನು ಎಂದು ರೈತರಿಗೆ ಪ್ರಶ್ನೆ ಮಾಡಿದ ಸಿಎಂ ಸಿದ್ಧರಾಮಯ್ಯ
ಕಳಸಾ ಬಂಡೂರಿ ಅದನ್ನ ಕೇಂದ್ರ ಸರಕಾರ ಕೊಡಬೇಕ್ರೀ ಎಲ್ಲಾ ನಮ್ಮನ್ನ ಹಿಡ್ಕೊಂಡು ಅಲ್ಲಾಡಿದ್ರೆ ಹೆಂಗ್ ರೀ ಆ ಜೋಶಿಗ್ ಒಂದ್ ಮಾತನ್ನು ಕೇಳಲ್ಲ ನೀವು ಎನ್ನುತ್ತಲೇ ವಿಮಾನ ನಿಲ್ದಾಣದೊಳಗೆ ಹೋದ ಸಿಎಂ ಸಿದ್ಧರಾಮಯ್ಯ.
ಸಿಎಂಗೆ ಬರ ಪರಿಹಾರ,ಕಳಸಾ ಬಂಡೂರಿ ಜಾರಿಗೆ ಒತ್ತಾಯಿಸಿ ರೈತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಲು ಹೋದಾಗ ಸಿಎಂ ಹೀಗೆಂದು ಬೆಂಗಳೂರಿನತ್ತ ತೆರಳಿದರು.
ಅದಕ್ಕೂ ಮೊದಲು ಸಿಎಂ ಜೊತೆಯಲ್ಲಿಯೇ ಇದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಡೆ ಕೈ ಮಾಡಿ ತೋರಿಸಿ ನಿಮಗೆ ಇಂತಹ ಒಳ್ಳೆ ಮಿನಿಸ್ಟರ ಕೊಟ್ಟಿದ್ದೇವೆ ಇನ್ನೇನು ಬೇಕೆಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಉದಯ ವಾರ್ತೆ ಹುಬ್ಬಳ್ಳಿ