ಕರ್ತವ್ಯದ ನಡುವೆಯೂ ಮತ್ತೊಂದು ಕವನ ಸಂಕಲನ ರಚನೆ ಮಾಡಿದ ದಕ್ಷ ಪೊಲೀಸ್ ಅಧಿಕಾರಿ ಸತೀಶ್ ಮಾಳಗೊಂಡ – ಡಿಸೆಂಬರ್ 24 ರಂದು ಬಿಡುಗಡೆಯಾಗಲಿದೆ ಕುರಸಾಲ್ಯಾ ಕವನಗಳು
ಹಾವೇರಿ –
ಪೊಲೀಸ್ ಇಲಾಖೆ ಅಂದಾಕ್ಷಣ ನೆನಪಾಗೋದು ಬಿಡುವಿಲ್ಲದ ಕೆಲಸ ಕಾರ್ಯಗಳು ಇದರ ನಡುವೆಯೂ ಕೂಡಾ ಪೊಲೀಸ್ ಅಧಿಕಾರಿ ಸತೀಶ್ ಮಾಳಗೊಂಡ ಅವರು ಮತ್ತೊಂದು ಕವನ ಸಂಕಲನವನ್ನು ರಚನೆ ಮಾಡಿದ್ದಾರೆ.ಹೌದು ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ದಕ್ಷ ಪೊಲೀಸ್ ಅಧಿಕಾರಿ ಸತೀಶ್ ಮಾಳಗೊಂಡ ಅವರು ಸಧ್ಯ ಎರಡನೆಯ ಕವನ ಸಂಕಲವನ್ನು ರಚನೆ ಮಾಡಿದ್ದು ಬಿಡುಗಡೆಗೆ ಸಜ್ಜಾಗಿದೆ.ಹೌದು ಇಲಾಖೆಯಲ್ಲಿ ಕರ್ತವ್ಯದ ಜೊತೆಯಲ್ಲೂ ಕೂಡಾ ಸಧ್ಯ ಎರಡನೇ ಕವನ ಸಂಕಲನ “ಕುರಸಾಲ್ಯಾನ ಕವನಗಳು ಎಂಬ ವಿಶಿಷ್ಟ ಶೀರ್ಷಿಕೆ ಪುಸ್ತಕ ಬಿಡುಗಡೆಗೆ ಸಿದ್ದವಾಗಿದ್ದು ಸಧ್ಯ ಮುದ್ರಣ ಗೊಂಡಿದೆ.ವಿಶೇಷವಾಗಿ ಮನೆಗೆ ಈ ಒಂದು ಕೃತಿಯನ್ನು ಪೊಲೀಸ್ ಅಧಿಕಾರಿ ಸತೀಶ್ ಮಾಳಗೊಂಡ ಅವರ ಪುತ್ರಿ ಮೊದಲಿಗೆ ಪೂಜೆಯನ್ನು ಮಾಡಿದರು.ಶಿಗ್ಗಾವಿ ಧ್ಯಾಮವ್ವನ ಮಡಿಲಿನಲ್ಲಿ ಈ ಒಂದು ಹೊಸ ಕೃತಿ ಪುಸ್ತಕ ಪೂಜೆ ಮಾಡಲಾಯಿತು.ಅಲ್ಲದೇ ದರ್ಗಾದ ಒಡಲಿನಲ್ಲೂ ಕೂಡಾ ಪೂಜೆ ಮಾಡಿಕೊಂಡು ಮನೆಯವರೊಂದಿಗೆ ಸಂಭ್ರಮವನ್ನು ಆಚರಿಸಿಕೊಂಡ ಚಿತ್ರಣವೊಂದು ಕಂಡು ಬಂದಿತು. ಇದೇ ವೇಳೆ ಎರಡನೇಯ ಕವನ ಸಂಕಲನದ ಈ ಒಂದು ಕೃತಿಯನ್ನು ಪೊಲೀಸ್ ಅಧಿಕಾರಿ ಸುರೇಶ್ ಜಿ ಕುಂಬಾರ ಪೂಜೆಯಲ್ಲಿ ಪಾಲ್ಗೊಂಡು ಬಿಡುಗಡೆಗೆ ಮುನ್ನವೇ 3260 ₹ ಕೊಟ್ಟು ಪುಸ್ತಕವನ್ನು ಖರೀದಿ ಮಾಡಿ ಶುಭವನ್ನು ಹಾರೈಸಿದರು. ಇನ್ನೂ ಈ ಒಂದು ಕೃತಿ ವಿಜಯಪುರದ ಚಡಚಣದಲ್ಲಿ ಬಿಡುಗಡೆಯಾಗಲಿದ್ದು ಸಿದ್ದತೆಗಳು ಕೂಡಾ ನಡೆದಿವೆ ಗಡಿನಾಡ ಗುಡಿ ಚಡಚಣದ ಖ್ಯಾತ ಕವಿ ಪ್ರೊ ರಾಜಶೇಖರ್ ಗ ಮಠಪತಿ ಯವರ ಜೋಳಿಗೆ ಸಭಾ ಭವನದಲ್ಲಿ ಈ ಒಂದು ಕೃತಿಯ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ.ದಯವಿಟ್ಟು ಎಲ್ಲಾ ಸಹೃದಯಿಗಳು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಶುಭವನ್ನು ಹಾರೈಸುವಂತೆ ಲೇಖಕರು ಪೊಲೀಸ್ ಅಧಿಕಾರಿಯಾಗಿರುವ ಸತೀಶ್ ಮಾಳಗೊಂಡ ಅವರು ವಿನಂತಿಯನ್ನು ಮಾಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ