ಪೊಲೀಸ್ ತನಿಖೆಯಲ್ಲಿ ಬಿಜೆಪಿ ಮುಖಂಡನ ಅಸಲೀಯತ್ತು ಬಯಲಿಗೆ ಬರಲಿದೆ.ಬೆಳಗಾವಿ ಜಿಲ್ಲೆಯ ಲಿಂಗಾಯತ ನಾಯಕರ ಮೇಲೆ ವ್ಯವಸ್ಥಿತವಾಗಿ ಷಡ್ಯಂತ್ರ.ವೀರೇಶ ಉಂಡಿ.
ಹುಬ್ಬಳ್ಳಿ:-ಉತ್ತರ ಕರ್ನಾಟಕದ ಲಿಂಗಾಯತ ಯುವ ನಾಯಕರು, ಕಾಂಗ್ರೆಸ್ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಚನ್ನರಾಜ್ ಹಟ್ಟಿಹೊಳಿ ಅವರ ಮೇಲೆ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಲಾಗಿದ್ದು ಇವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸರ್ಕಾರ ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ,
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸದುದ್ದೇಶಕ್ಕೆ ಅಧಿವೇಶನ ಬಳಸಿಕೊಳ್ಳುವ ಸಮಯದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಇದನ್ನು ರಾಜಕೀಯವಾಗಿ ಪರಿವರ್ತಿಸಿ ವಾತಾವರಣ ಹಾಳು ಮಾಡುತ್ತಿರುವುದು ತೀರ ಸಣ್ಣತನದ ಕೆಲಸವಾಗಿದೆ. ಉದ್ದೇಶ ಪೂರಕವಾಗಿ ಬಿಜೆಪಿ ಮುಖಂಡರು ತಮ್ಮಿಂದ ತಾವೇ ಈ ರೀತಿಯ ಅಪರಾಧ ಕೃತ್ಯ ಸೃಷ್ಟಿಸಿ ಲಿಂಗಾಯತ ನಾಯಕನನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು ಇದಕ್ಕೆ ಲೋಕಸಭೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು
ಕೆಪಿಸಿಸಿ ಸಂಯೋಜಕರು
ಹಾಗೂ ಲಿಂಗಾಯತ ಮುಖಂಡರು ವೀರೇಶ ಉಂಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.