ಡಾ: ಎಸ್ ಎಪ್ ಕಮ್ಮಾರ ಹುಬ್ಬಳ್ಳಿ ಕಿಮ್ಸ್ ಪ್ರಭಾರ ನಿರ್ಧೇಶಕರಾಗಿ ಅಧಿಕಾರ.
ಹುಬ್ಬಳ್ಳಿ:- ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಪ್ರಭಾರಿ ನಿರ್ಧೇಶಕರಾಗಿ ಡಾ:- ಎಸ್.ಎಪ್.ಕಮ್ಮಾರ ಅಧಿಕಾರವಹಿಸಿಕೊಂಡಿದ್ದಾರೆ.
ಡಾ:ಎಸ್.ಎಪ್ ಕಮ್ಮಾರ ಅವರು ಆರು ವರ್ಷದಿಂದ PMR ವಿಭಾಗದ ಮುಖ್ಯಸ್ಥರಾಗಿ ಹಾಗೂ ಎಲಬು ಮತ್ತು ಕೀಲು ವಿಭಾಗದ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.ಡಿಸೆಂಬರ 7 ಕ್ಕೆ ಅಂದರೆ ಇಂದು ಕಿಮ್ಸ ನಿರ್ಧೇಶಕ ಡಾ: ರಾಮಲಿಂಗಪ್ಪ ಅಂಟರದಾನಿ ಅವರ ಅಧಿಕಾರವದಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕಮ್ಮಾರ ಅವರಿಗೆ ಅಧಿಕಾರ ನೀಡಲಾಗಿದೆ.
ಕಿಮ್ಸ್ ನಿರ್ಧೇಶಕರ ಸ್ಥಾನಕ್ಕೆ ಸರಕಾರ ಆದೇಶ ಮಾಡುವವರೆಗೆ ಡಾ:ಎಸ್.ಎಪ್.ಕಮ್ಮಾರ ಅವರು ನಿರ್ಧೇಶಕರ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.