ಮರಳು ಭೂಮಿಯಲ್ಲಿ ಕಮಲ ಅರಳಿಸಿದ ಕರ್ನಾಟಕದ ಚಾಣಕ್ಯ ಇಂದು ಹುಬ್ಬಳ್ಳಿಗೆ.ಚುನಾವಣಾ ಚತುರ ಜೋಶಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ.

Share to all

ಮರಳು ಭೂಮಿಯಲ್ಲಿ ಕಮಲ ಅರಳಿಸಿದ ಕರ್ನಾಟಕದ ಚಾಣಕ್ಯ ಇಂದು ಹುಬ್ಬಳ್ಳಿಗೆ.ಚುನಾವಣಾ ಚತುರ ಜೋಶಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ.

ಹುಬ್ಬಳ್ಳಿ –

ಹೌದು ಮರಳು ಭೂಮಿಯಲ್ಲೂ ಕಮಲದ ಹೂವನ್ನು ಅರಳಿಸಿದ ಚುನಾವಣಾ ಚಾಣಕ್ಯ ಇಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷ ಮತ್ತೆ ದೊಡ್ಡ ಪ್ರಮಾಣದಲ್ಲಿ ಗೆಲುವನ್ನು ಸಾಧಿಸಿದೆ.ಬಿಜೆಪಿ ಪಕ್ಷದ ಈ ಒಂದು ಅಭೂತಪೂರ್ಣ ಗೆಲುವಿಗೆ ಕಾರಣರಾಗಿದ್ದಾರೆ. ಜೋಶಿ.ಚುನಾವಣೆಯ ಆರಂಭ ದಿಂದಲೂ ಕೊನೆಯ ದಿನದ ವರೆಗೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಅಧಿಕಾರದಲ್ಲಿದ್ದ ಕಾಂಗ್ರೇಸ್ ಪಕ್ಷದ ಭದ್ರಕೋಟೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ತಮ್ಮ ತಂತ್ರಗಾರಿಕೆಯಿಂದ ಛಿದ್ರ ಮಾಡಿದ್ದಾರೆ.ಧಾರವಾಡಿಗನ ರಣತಂತ್ರಕ್ಕೆ ಮಾರವಾಡಿಗರ ನಾಡಿನ ಜನತೆ ಜನಮನ್ನಣೆಯನ್ನು ನೀಡಿದ್ದಾರೆ.ಪ್ರಹ್ಲಾದ್ ಜೋಶಿಯವರ ನೇತ್ರತ್ವದಲ್ಲಿ ರಾಜಸ್ಥಾನ ರಾಜ್ಯದಲ್ಲಿ ಕೇಸರಿ ಪಡೆ ಭರ್ಜರಿಯಾದ ಯಶಸ್ಸನ್ನು ಕಂಡಿದೆ.ಈ ಬಾರಿ ರಾಜಸ್ಥಾನದಲ್ಲಿ ಕನ್ನಡಿಗರ ಕಮ್ಮಾಲ್ ಕಂಡು ಬಂದಿದೆ.ಇನ್ನೂ ಈ ಒಂದು ಸಾಧನೆಯ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನಗರಕ್ಕೆ ಆಗಮಿಸುತ್ತಿದ್ದಾರೆ.ರಾಜಸ್ಥಾನ ರಾಜ್ಯವನ್ನು ಗೆದ್ದುಕೊಂಡು ನಗರಕ್ಕೆ ಬರುತ್ತಿರುವ ಇವರನ್ನು ಸ್ವಾಗತಿಸಲು ಭರ್ಜರಿಯಾದ ಸಿದ್ದತೆಯನ್ನು ಮಾಡಲಾಗಿದೆ.ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ವತಿಯಿಂದ ಯುವ ನಾಯಕ ಅನೂಪ ಬಿಜವಾಡ ನೇತ್ರತ್ವದಲ್ಲಿ ನೂರಾರು ಬೈಕಗಳೊಂದಿಗೆ ಸ್ವಾಗತ ಮಾಡಲು ಸಜ್ಜಾಗಿದ್ದಾರೆ.ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬರಲು ಮುಖ್ಯ ರೂವಾರಿಗಳಾದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಡಿಸೆಂಬರ 9ರ ಬೆಳಿಗ್ಗೆ 8 30 ಗಂಟೆಗೆ ಆಗಮಿಸಲಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು ಅದ್ದೂರಿಯಾಗಿ ಸ್ವಾಗತ ಕೋರಲು ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಲಾಗಿದ್ದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ ನಿಂದ ಪಕ್ಷದ ಎಲ್ಲ ಪಾಲಿಕೆ ಸದಸ್ಯರು,ಪ್ರಮುಖರು, ಯುವಕರು, ಮಹಿಳೆಯರು ,ಹಿರಿಯರು, ಪದಾಧಿಕಾರಿಗಳು, ಕಾರ್ಯಕರ್ತರು , ಅಭಿಮಾನಿಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ವಿಜೃಂಭಜನೆಯಿಂದ ಸ್ವಾಗತಿಸಿ ಗೆಲುವಿಗೆ ಕಾರಣರಾದ ನಾಯಕರನ್ನು ಬರಮಾಡಿಕೊಳ್ಳಲಿದ್ದಾರೆ.ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸುವಂತೆ ಮಂಡಳ ಅದ್ಯಕ್ಷ ಅನೂಪ.ಬಿಜವಾಡ ಕೋರಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author