ಯಲ್ಲಾಪುರ ಅರಣ್ಯ ವಿಭಾಗದ DRFO ಶ್ರೀನಿವಾಸ ನಾಯ್ಕ ಮೇಲೆ ಕ್ರಮಕ್ಕೆ ಅರಣ್ಯ ಸಚಿವರಿಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ.
ಯಲ್ಲಾಪುರ:- ಹೌದು ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆಯಲ್ಲಿ ಕಳೆದ ಹನ್ನೆರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ನಾಯಕ ಮೇಲೆ ಕಾನೂನಿನ ಕ್ರಮಕೈಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಉದಯ ವಾರ್ತೆ DRFO ಶ್ರೀನಿವಾಸ ನಾಯ್ಕ ಅವರ ಬಗ್ಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಅರಣ್ಯ ಅಧಿಕಾರಿ ಮತ್ತು ಅಧಿಕಾರಿಗಳಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯವೇ?ಎಂದು ಉದಯ ವಾರ್ತೆ ವರದಿ ಪ್ರಸಾರ ಮಾಡಿತ್ತು.ಇದ್ಯಾವುದಕ್ಕೂ ಸ್ಪಂದಿಸದ ಹಿರಿಯ ಅಧಿಕಾರಿಗಳಾದ RFO L.A.Math,..ACF Anand..DCF shshidhar hegade..CCF vasant reddi ಸಾಹೇಬ್ರು ಅವರ ಮೇಲೆ ಏನೂ ಕ್ರಮಕೈಕೊಳ್ಳದೇ ಒಂದೇ ಒಂದು ನೋಟೀಸ್ ಕೊಟ್ಟು ಕೈ ತೊಳೆದುಕೊಂಡರು.ಇದಾದ ಮೇಲೆ ಮತ್ತೆ ಉದಯ ವಾರ್ತೆ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವರು ಯಾರು ? ಎಂದು ಪ್ರಶ್ನೆ ಮಾಡಿ ಇದೇ ಶ್ರೀನಿವಾಸ ನಾಯ್ಕ ಅವರ ವರದಿ ಪ್ರಸಾರ ಮಾಡಿತ್ತು.
ಉದಯ ವಾರ್ತೆ ವರದಿ ಇಟ್ಟುಕೊಂಡು ಈಗ ಸಾಮಾಜಿಕ ಕಾರ್ಯಕರ್ತರೊಬ್ಬರು ಅರಣ್ಯ ಅಧಿಕಾರಿ ಮೇಲೆ ಕಾನೂನು ಕ್ರಮಕೈಕೊಳ್ಳುಬೇಕೆಂದು ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅರಣ್ಯ ಅಧಿಕಾರಿ ಕಳೆದ ಹನ್ನೆರಡರಿಂದ ಹದಿಮೂರು ವರ್ಷ ಒಂದೇ ಕಡೆ ಕಾರ್ಯನಿರ್ವಸುತ್ತಿದ್ದಾರೆ.ವರ್ಗಾವಣೆ ಆಗುತ್ತೇ ಅಂತಾ ಗೊತ್ತಾಗುತ್ತಿದ್ದಂತೆ ರಾಜಕಾರಣಿ ಗಳ ದುಂಬಾಲು ಬಿದ್ದು ವರ್ಗಾವಣೆ ರದ್ದುಪಡಿಸಿಕೊಳ್ಳತಾರೆ.ಅಲ್ಲದೇ ಕೆಲವು ಗ್ರಾಮಗಳಲ್ಲಿ ಶ್ರೀನಿವಾಸ ನಾಯ್ಕ ಅವರೇ ಅರಣ್ಯ ಒತ್ತುವರಿ ಮಾಡಲು ಹೇಳಿ ಅವರಿಂದ ಪ್ರಸಾದ ಪಡೆಯುತ್ತಾರೆ.ಈ ಹಿಂದೆ ಹುಲಿ ಪೆಂಡೆಂಟ್ ಧರಿಸಿದ್ದು ಕಂಡು ಬಂದರೂ ಅವರ ಮೇಲೆ ಕ್ರಮಕೈಕೊಂಡಿಲ್ಲಾ. ಆ ಹಿನ್ನೆಲೆಯಲ್ಲಿ ಅವರ ಮೇಲೆ ಅರಣ್ಯ ಸಚಿವರು ತಕ್ಷಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿ.. ಅರಣ್ಯ ಒತ್ತುವರಿ ಮಾಡಿಕೊಂಡ ಗ್ರಾಮಗಳ ಜನರನ್ನು ವಿಚಾರಣೆ ಮಾಡಿದರೆ ಅವರ ಹಕೀಕತ್ತು ಗೊತ್ತಾಗುತ್ತೇ ಅಂತಾ ಪತ್ರ ಬರೆದಿದ್ದಾರೆ.
ಕೆಲ ದಿನಗಳ ಹಿಂದೆ ಯಲ್ಲಾಪುರ ವಲಯದ ಕಾಲಮ್ಮ್ ನಗರದ ಮನೆಯೊಂದರ ಪ್ರಿಡ್ಜ್ ನಲ್ಲಿ ಶೇಖರಿಸಿಟ್ಟ ಮಾಂಸವನ್ನು ವಶಪಡಿಸಿಕೊಂಡು FSIL ಗೆ ಕಳುಹಿಸಿ ಖಚಿತ ಪಡಿಸಿಕೊಳ್ಳುವ ಮುನ್ನವೇ ಅದು ಕಾಡು ಪ್ರಾಣಿಗಳ ಮಾಂಸವೆಂದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿದ ಅಧಿಕಾರಿಗಳು,ಅದೇ ನಿಮ್ಮ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಹುಲಿ ಪೆಂಡೆಂಟ್ ಧರಿಸಿರುವುದು ರಾಜ್ಯಾದ್ಯಂತ ಸುದ್ದಿಯಾದರೂ ಅಲ್ಲದೇ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಈವರೆಗೂ ಪ್ರಕರಣ ದಾಖಲಿಸದೇ ಮೀನ ಮೇಷ ಎಣಿಸಿದ ಕೆನರಾ ವ್ರತ್ತದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಯವರೇ ಏನು ಉತ್ತರ ಕೊಡತೀರಿ..ಇಲ್ಲಿ ಸಾಮಾನ್ಯರಿಗೊಂದು ಕಾನೂನು ಅಧಿಕಾರಿಗಳಿಗೊಂದು ಕಾನೂನೇ ಇದಕ್ಕೆ ಅಣ್ಯ ಸಚಿವರು ಉತ್ತರಿಸಬೇಕಾಗಿದೆ.
ಉದಯ ವಾರ್ತೆ ಯಲ್ಲಾಪುರ