ರಾಜಸ್ಥಾನ ಸಮರದ ಗೆಲುವಿನ ರೂವಾರಿಗೆ ಹುಬ್ಬಳ್ಳಿಯಲ್ಲಿ ಹೂವಿನ ಆರತಿ.ಹುಬ್ಬಳ್ಳಿ ಜನರಿಂದ ಅಭೂತಪೂರ್ವ ವೆಲ್ ಕಮ್
ಹುಬ್ಬಳ್ಳಿ-
ರಾಜಸ್ಥಾನದಲ್ಲಿ ಬಿಜೆಪಿ ಪಕ್ಷದ ವಿಧಾನ ಸಭಾ ಚುನಾವಣೆಯಲ್ಲಿ ಅಭೂತಪೂರ್ಣ ಸಾಧೆಯನ್ನು ಮಾಡಿದೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ ಈ ಬಾರಿ ಪಕ್ಷವು ಅಧಿಕಾರದ ಚುಕ್ಕಾಣೆಯನ್ನು ಹಿಡಿದಿದೆ.ಆ ಒಂದು ಅಭೂತಪೂರ್ವ ಸಾಧನೆಯ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ರಮ ಸಾಕಷ್ಟಿದೆ.ಬಿಡುವಿಲ್ಲದ ಪ್ರವಾಸ ತಂತ್ರಗಾರಿಕೆಯ ಫಲವಾಗಿ ರಾಜಸ್ಥಾನದಲ್ಲಿ ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆಯನ್ನು ಏರಿದ್ದು ಇನ್ನೂ ಈ ಒಂದು ಸಾಧನೆಗೆ ಕಾರಣಿಕರ್ತರಾದ ಪ್ರಹ್ಲಾದ್ ಜೋಶಿಯವರು ಫಲಿತಾಂಶದ ನಂತರ ಹುಬ್ಬಳ್ಳಿಗೆ ಬರತ್ತಿದ್ದಂತೆ ಇವರನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.
ವಿಮಾನ ನಿಲ್ದಾಣದಲ್ಲಿ ಭರ್ಜರಿಯಾಗಿ ವೆಲ್ ಕಮ್ ಮಾಡಿಕೊಂಡ ಪಕ್ಷದ ಶಾಸಕರು ಮುಖಂಡರು ನಾಯಕರು ಪ್ರೀತಿಯಿಂದ ತವರೂರಿಗೆ ನೆಚ್ಚಿನ ನಾಯಕನನ್ನು ಸ್ವಾಗತಿಸಿಕೊಂಡು ವಿಜಯೋತ್ಸವ ಆಚರಣೆ ಮಾಡಿದರು.ನಗರದ ವಿಮಾನ ನಿಲ್ದಾಣದಿಂದ ಕ್ಯೂಬಿಕ್ಸ್ ಹೊಟೇಲ್ ವರೆಗ ಭರ್ಜರಿಯಾಗಿ ಮೆರವಣಿಗೆ ಮಾಡಿದ ಪಕ್ಷದವರು ನೆಚ್ಚಿನ ನಾಯಕರಿಗೆ ಪ್ರೀತಿಯನ್ನು ತೋರಿಸಿಕೊಟ್ಟರು.ಶಾಸಕರಾದ ಎಮ್ ಆರ್ ಪಾಟೀಲ,ಮಹೇಶ ತೆಂಗಿನಕಾಯಿ,ಮೇಯರ್ ವೀಣಾ ಭರದ್ವಾಡ,ಪಾಲಿಕೆಯ ಸದಸ್ಯರಾದ ಸಂತೋಷ ಚವ್ಹಾಣ,ಶಿವು ಹಿರೇಮಠ,ವಿಜಯಾನಂದ ಶೆಟ್ಟಿ,ತಿಪ್ಪಣ್ಣ ಮಜ್ಜಗಿ,ಪ್ರಭು ನಾವಲಗಿಮಠ ಅನೂಪ.ಬಿಜವಾಡ,ಅಣ್ಣಪ್ಪ ಗೋಕಾಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉದಯ ವಾರ್ತೆ ಹುಬ್ಬಳ್ಳಿ