ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಾಕು ಇರಿತ.ಹಾಡು ಹಗಲೇ ಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ಚಾಕು.
ಹುಬ್ಬಳ್ಳಿ:-ಸರಾಯಿ ಕುಡಿಯಲು ಗ್ಲಾಸ್ ಕೊಡಲಿಲ್ಲಾ ಎಂದು ಸಿಟ್ಟಿಗೆದ್ದು ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಆನಂದ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.
ಪ್ರಕಾಶ್ ಕಿತ್ತಳೆ ಎಂಬುವನೇ ಚಾಕು ಇರಿತಕ್ಕೊಳಗಾದ ಯುವಕ.ಪ್ರಕಾಶ್ ಆನಂದ ನಗರದ ನಿವಾಸಿಯಾಗಿದ್ದು ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾನೆ.
ಜಾವೇದ್ ಬೆಂಡಿಗೇರಿ ಎಂಬಾತ ಕಿರಾಣಿ ಅಂಗಡಿಗೆ ಬಂದು ಸರಾಯಿ ಕುಡಿಯಲು ಗ್ಲಾಸ್ ಕೇಳಿದಾಗ ಪ್ರಕಾಶ ಎಂಬಾತ ಗ್ಲಾಸ್ ಇಲ್ಲಾ ಅಂತಾ ಹೇಳಿದ್ದಕ್ಕೆ ಚಾಕುವುನಿಂದ ಇರಿದಿದ್ದಾನೆ
ಗ್ಲಾಸ್ ಇಲ್ಲ ಎಂದು ಹೇಳುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ಬೈದು ಮೊದಲು ಬಾಟಲ್ ನಿಂದ ಹಲ್ಲೆ ಮಾಡಿ ನಂತರ ಕುಡಿದ ಮತ್ತಿನಲ್ಲಿ ಚಾಕು ಇರಿದು ಜಾವೇದ್ ಎಸ್ಕೇಪ್ ಆಗಿದ್ದಾನೆ.
ಸ್ಥಳಕ್ಕೇ ಹಳೆ ಹುಬ್ಬಳ್ಳಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಲ್ಲದೇ ಆರೋಪಿ ಜಾವೇದ್ ಬಂಧನಕ್ಕೆ ಜಾಲ ಬೀಸಿದ್ದಾರೆ.ಚಾಕು ಇರಿತಕ್ಕೊಳಗಾದ ಪ್ರಕಾಶ
ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.