ಹುಬ್ಬಳ್ಳಿಯಲ್ಲಿ ಗಾಂಜಾ ಸದ್ದು.ಗಾಂಜಾ ಗಿರಾಕಿಗಳ ಪತ್ತೆ ಯಾವಾಗ.?
ಹುಬ್ಬಳ್ಳಿ:-ನಿನ್ನೆ ಉದಯ ವಾರ್ತೆ ಹುಬ್ಬಳ್ಳಿಯಲ್ಲಿ ಗಾಂಜಾ ಗಮ್ಮತ್ತು.ಕಂಡು ಕಾಣದೆ ಕುರುಡರಾದ ಬೆಂಡಿಗೇರಿ ಪೋಲೀಸರು ಅಂತಾ ವರದಿ ಮಾಡಿತ್ತು.
ಈಗ ಬೆಂಡಿಗೇರಿ ವ್ಯಾಪ್ತಿಯ ವೀರಾಪುರ ಓಣಿಯ ಟಿ.ಬಿ.ಮಿಲ್ಕ ಹಿಂದುಗಡೆ ದಿನ ನಿತ್ಯ ಗಾಂಜಾ ಸವಿಯುವ ಗ್ಯಾಂಗವೊಂದರ ವಿಡಿಯೋವನ್ನ ನಾವು ನಿಮಗೆ ತೋರಿಸ್ತೀವಿ ಈಗಲಾದರೂ ಗಾಂಜಾ ಸೇದುವವರಿಂದ ಹಿಡಿದು ಗಾಂಜಾ ಮಾರಾಟ ಮಾಡುವವರನ್ನು ಪೋಲೀಸರು ಪತ್ತೆ ಹಚ್ಚಿ ಅವರಿಗೆ ಬುದ್ದಿ ಕಲಿಸಬೇಕಿದೆ.
ಪೋಲೀಸರೇ ವಿಡಿಯೋ ಇದೆ ನೋಡಿ.
ಈ ವಿಡಿಯೋ ನೋಡಿದ ಮೇಲಾದರೂ ಗಾಂಜಾ ಗಮ್ಮತ್ತಿಗೆ ಕೊನೆ ಹಾಡತಾರಾ ಬೆಂಡಿಗೇರಿ ಪೋಲೀಸರು.?ಉದಯ ವಾರ್ತೆಗೆ ಸಿಕ್ಕ ಮಾಹಿತಿ ಪ್ರಕಾರ ನಿನ್ನೆ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಗಾಂಜಾ ಚೈನ್ ಲಿಂಕ್ ಭೇದಿಸಲು ಕ್ರೈಂ ಟೀಂ ಇಂದು ಮುಂಜಾನೆಯಿಂದಲೇ ಕಾರ್ಯಪ್ರವ್ರತ್ತವಾಗಿದೆ ಅಂತೆ.
ಗಾಂಜಾ ಗುಂಗನ್ನ ಬೆಂಡಿಗೇರಿ ಪೋಲೀಸರು ಬೇರು ಸಮೇತ ಕಿತ್ತು ಹಾಕಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಡತಾರೆ ಅನ್ನೋ ಭರವಸೆ ಉದಯ ವಾರ್ತೆಗೆ ಇದೆ.
ಉದಯ ವಾರ್ತೆ ಹುಬ್ಬಳ್ಳಿ.