ಮಾನವೀಯತೆ ಮೆರೆದ ಬೆಂಡಿಗೇರಿ ಪೋಲೀಸ ಠಾಣೆಯ ಪೋಲೀಸರು.ಬಡ್ಡಿ ದಂಧೆಕೋರರಿಂದ ಏಟು ತಿಂದು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದವನ ಆಸ್ಪತ್ರೆಗೆ ದಾಖಲಿಸಿದ ಹವಾಲ್ದರ್ ನೀಲಮ್ಮನವರ ಹಾಗೂ ಸೋಮು.ಮೇಟಿ.
ಹುಬ್ಬಳ್ಳಿ:-ಹೌದು ಸರಿಯೋ ತಪ್ಪೋ ಪೋಲೀಸರು ಮನೆ, ಮಠ,ತಮ್ಮ ಕುಟುಂಬ ಎಲ್ಲವನ್ನೂ ಮರೆತು ಜನರಿಗೋಷ್ಕರ 24 ಘಂಟೆ ದುಡಿಯುವ ಪೋಲೀಸರು ಮಾಡುವ ಒಂದೊಂದು ಕೆಲಸದಲ್ಲಿ ತಪ್ಪು ಹುಡುಕುವ ಇಂದಿನ ಕಾಲದಲ್ಲಿ ಒಳ್ಳೆ ಕೆಲಸ ಮಾಡುವ ಪೋಲೀಸರು ಇದ್ದಾರೆ ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ…
ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಇಂದು ಮದ್ಯಾಹ್ನ ಚಿನ್ನಾ ನಾಗಣ್ಣ ಎಂಬ ವ್ಯಕ್ತಿಯನ್ನು ನಾಲ್ಕು ಜನರ ತಂಡ ಕಾರಿನಲ್ಲಿ ಬಂದು ರಾಡ್ ಮತ್ತು ಚೈನದಿಂದ ಹೊಡೆದು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು.
ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿದ ಜನ ಪೋಲೀಸರಿಗೆ ಪೋನ್ ಮಾಡಿದ್ದಾರೆ. ಪೋನ್ ಬಂದಿದ್ದೇ ತಡ ಪೋಲೀಸ ಸೋಮು ಮೇಟಿ ಹಾಗೂ ಹವಾಲ್ದರ್ ನೀಲಮ್ಮನವರ ತಕ್ಷಣ ಸ್ಥಳಕ್ಕೆ ಹೋಗಿ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಬಡ್ಡಿ ದಂಧೆಕೋರರಿಂದ ಏಟು ತಿಂದ ವ್ಯಕ್ತಿ ಈಗ ಸುಧಾರಿಸಿಕೊಳ್ಳುತ್ತಿದ್ದು ಪೋಲೀಸರಿಗೆ ಧನ್ಯವಾದ ಹೇಳುತ್ತಿದ್ದಾನೆ.ಸರಿಯಾದ ಸಮಯಕ್ಕೆ ಪೋಲೀಸರು ಬಾರದೇ ಹೋಗಿದ್ದರೆ ನಾನು ಸತ್ತೇ ಹೋಗುತ್ತಿದ್ದೇ ಎಂದು ಕಣ್ಣೀರು ಹಾಕಿದ್ದಾನೆ.
ಒಂದು ಸಣ್ಣ ವಿಷಯದಲ್ಲೂ ಪೋಲೀಸರ ತಪ್ಪನ್ನು ಹುಡುಕುವ ಇಂತಹ ಕಾಲದಲ್ಲಿ ಇಂತಹ ಒಳ್ಳೆಯ ಕೆಲಸ ಮಾಡುವ ಪೋಲೀಸರಿಗೆ ಒಂದು ಧನ್ಯವಾದಗಳನ್ನು ಹೇಳಲೇಬೇಕು.
ಧನ್ಯವಾದಗಳು ಸೋಮು ಮೇಟಿ ಹಾಗೂ ನೀಲಮ್ಮನವರ ಅವರೇ.
ಉದಯ ವಾರ್ತೆ ಹುಬ್ಬಳ್ಳಿ.