ಕಾಂತರಾಜ್ ವರದಿ ಜಾರಿಗೊಳಿಸಿ.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಆರ್ ಮೋಹನ್.
ಹುಬ್ಬಳ್ಳಿ:-ಹಿಂದುಳಿದ ಮತ್ತು ಅತೀ ಹಿಂದುಳಿದ ಜಾತಿ ವರ್ಗಗಳಿಗೆ ಸಂಜೀವಿನಿಯಾಗಿರುವ ಎಚ್.ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಶಿವಮೊಗ್ಗದ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾಗೃತಿ ವೇದಿಕೆಯ ಅದ್ಯಕ್ಷ ಆರ್.ಮೋಹನ ಒತ್ತಾಯಿಸಿದ್ದಾರೆ..
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್ ಮೋಹನ ಸಾಮಾಜಿಕ ನ್ಯಾಯಕ್ಕೆ ಬದ್ದರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದುಳಿದ ಆಯೋಗದ ಅದ್ಯಕ್ಷರಾಗಿರುವ ಜಯಪ್ರಕಾಶ ಹೆಗ್ಡೆ ಅವರ ಮೇಲೆ ಒತ್ತಡ ಹೇರಿ ವರದಿಯನ್ನು ತರಿಸಿಕೊಂಡು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಒಂದೆರಡು ಬಲಾಡ್ಯ ಜಾತಿಗಳ ಮುಖಂಡರು ವರದಿ ಜಾರಿಯಾಗದಂತೆ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ.ಅವರ ಷಡ್ಯಂತ್ರಕ್ಕೆ ಹಲವು ಕಾರಣಗಳಿವೆ ಎಂದು ಆರ್ ಮೋಹನ ಗಂಭೀರ ಆರೋಪ ಮಾಡಿದ್ದಾರೆ.ಹಲವು ವರ್ಷಗಳಿಂದ ಪಕ್ಷಾತೀತವಾಗಿ ಕಾಂತರಾಜ ವರದಿಗೆ ಒತ್ತಾಯಿಸುತ್ತಾ ಹೋರಾಟಗಳನ್ನು ಮಾಡತಾ ಬಂದಿದ್ದೇವೆ ಆ ಹಿನ್ನೆಲೆಯಲ್ಲಿ ಈಗ ಮುಖ್ಯಮಂತ್ರಿಗಳ ಕಾಂತರಾಜ ವರದಿಯನ್ನು ಜಾರಿಗೊಳಿಸಲೇಬೇಕು.ಇಲ್ಲದೇ ಹೋದರೆ ಜನಜಾಗೃತಿ ವೇದಿಕೆ ಮೂಲಕ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ
ಪ್ರಕಾಶ ಬುರಬುರೆ ( ಕ್ಷತ್ರಿಯ)
ನಾಗರಾಜ ಗುರಿಕಾರ (ಕುರುಬ)
ದರ್ಶನ ಬಳೇಶ್ವರ (ಜೈನ)
ಪ್ರಶಾಂತ ಕ್ಷತ್ರಿಯ ( ಮರಾಠ)
ಸುನೀಲ ಪಾನಮುಕೆ (ಮರಾಠ)
ಉಮೇಶ ವಡಕಣ್ಣವರ(ಕುರುಬ)
ಮಹಮ್ಮದ್ ಜಾಫರ್ ಸಂಗೂರ (ಮುಸ್ಲಿಂ)
ದೇವಿಂದ್ರಪ್ಪ (ಕಬ್ಬಲಿಗ) ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉದಯ ವಾರ್ತೆ ಹುಬ್ಬಳ್ಳಿ