ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ‌.!! ದಲಿತರಿಗಿಲ್ಲ ಹೊಟೆಲ್,ಕಟಿಂಗ್ ಶಾಪ್ ದೇವಸ್ಥಾನದಲ್ಲಿ ಅವಕಾಶ..!

Share to all

ಧಾರವಾಡ ಜಿಲ್ಲೆಯಲ್ಲಿ ಅಸ್ಪ್ರಶ್ಯತೆ ಜೀವಂತ‌.!!
ದಲಿತರಿಗಿಲ್ಲ ಹೊಟೆಲ್,ಕಟಿಂಗ್ ಶಾಪ್ ದೇವಸ್ಥಾನದಲ್ಲಿ ಅವಕಾಶ..!

ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಅಸ್ಪ್ರಶ್ಯತೆ ಜೀವಂತ‌ವಾಗಿದೆಯಂತೆ.ಹೌದು ಹಾಗಂತ ಅಲ್ಲಿಯ ಜನರೇ ಹೇಳ್ತಿದ್ದಾರೆ.

ನಮ್ಮ ಗ್ರಾಮದಲ್ಲಿ ಇನ್ನೂ ಅಸ್ಪ್ರಶ್ಯತೆ ಜೀವಂತವಿದೆ.
ಗ್ರಾಮದಲ್ಲಿ ಕೆಳಜಾತಿ ಮೇಲ್ಜಾತಿ ಅನ್ನೋ ಪದ್ದತಿ ಜಾರಿಯಲ್ಲಿದೆ.
ಅಕಸ್ಮಾತ್ ಕಟಿಂಗ್ ಶಾಪ್ ಗೆ ಹೋದ್ರೆ ಒಳಗೆ ಬಿಡಲ್ಲ.
ಕಟಿಂಗ್ ಶಾಪ್ ನಲ್ಲಿ ನಮಗೆ ಕಟಿಂಗ್ ಮಾಡಲ್ಲ.ಕಟಿಂಗ್ ಮಾಡಿದ್ರು 500 ರಿಂದ ಸಾವಿರ ಹಣ ಕೇಳ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ರೊಟ್ಟಿಗವಾಡ ಗ್ರಾಮದಲ್ಲಿ ಸಮಾನತೆ ಇಲ್ಲ.
ನಮ್ಮ‌ನ್ನು ಕೀಳಾಗಿ ನೋಡ್ತಾರೆ ಎನ್ನುತ್ತಿರೋ ದಲಿತ ಸಮುದಾಯದ ಯುವಕರು‌.
ಹೊಟೆಲ್ ನಲ್ಲಿ ದಲಿತರಿಗೆ ಪ್ರತ್ಯೇಕ ಜಾಗ‌.
ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ದಲಿತರಿಗೆ ಉಪಹಾರ ನೀಡ್ತಿರೋ ಸವರ್ಣೀಯರು.ಕಟಿಂಗ್ ಶಾಪ್ ಗೆ ಹೋದ್ರೆ ದೊಡ್ಡವರೆಲ್ಲ ಬರ್ತಾರೆ.ನಾವ ಕಟಿಂಗ್ ಮಾಡಲ್ಲ ಎನ್ನುತ್ತಿರೋ ಮಾಲೀಕರು.ಸ್ವಾತಂತ್ರ್ಯ ಸಿಕ್ಕು ದಶಕಗಳೇ ಕಳೆದರೂ ಅನಿಷ್ಟ ಪದ್ದತಿ ಜೀವಂತವಾಗಿದೆ ಎಂದು ಯುವಕರು ಅಳಲು ತೋಡಿಕೊಂಡಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author