ಹುಬ್ಬಳ್ಳಿಯಲ್ಲಿ ಮುಂದುವರೆದ ಗಾಂಜಾ ರೇಡ್.ಬೆಂಡಿಗೇರಿ ಪೋಲೀಸರಿಂದಲೂ ಗಾಂಜಾ ರೇಡ್.ಇಬ್ಬರ ಬಂಧನ.
ಹುಬ್ಬಳ್ಳಿ:-ಕಳೆದ ಎರಡ್ಮೂರು ದಿನಗಳಿಂದ ಗಾಂಜಾ ಜಾಲವನ್ನ ಬೆನ್ನತ್ತಿರುವ ಪೋಲೀಸರು ಇಂದು ಬೆಂಡಿಗೇರಿ ಪೋಲೀಸರು ಭರ್ಜರಿ ಗಾಂಜಾ ಮಾರಾಟಗಾರರ ಭೇಟಿ ಆಡಿದ್ದಾರೆ.
ಕಳೆದ ಸೊಮವಾರದಿಂದ ಉದಯ ವಾರ್ತೆ ಹುಬ್ಬಳ್ಳಿಯಲ್ಲಿ ಧಮ್ ಮಾರೋ ಧಮ್ ಅಂತಾ ಗಾಂಜಾ ವರದಿಯನ್ನ ಉದಯ ವಾರ್ತೆ ಪ್ರಸಾರ ಮಾಡಿತ್ತು. ಅಲ್ಲದೇ ಗಾಂಜಾದ ವಿಡಿಯೋ ಪ್ರಸಾರ ಮಾಡಿ ವರದಿಯನ್ನ ಮಾಡಿತ್ತು.
ಉದಯ ವಾರ್ತೆ ಗೆ ಸ್ಪಂದಿಸಿದ ಬೆಂಡಿಗೇರಿ ಪೋಲೀಸರು ಪಿಆಯ್ ಜಯಪಾಲ.ಪಾಟೀಲ ಹಾಗೂ ಪಿಎಸ್ ಆಯ್ ಶರಣಗೌಡ.ಪಾಟೀಲ ನೇತ್ರತ್ವದಲ್ಲಿ ಇಂದು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಬಂಧಿತರಿಂದ 1 kg 700 ಗ್ರಾಂ ಗಾಂಜಾ ಹಾಗೂ ಲಾಂಗು ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕೆ.ಬಿ.ನಗರದ ಅಖಿಲೇಶ.ಯರಮನಾಳ ಹಾಗೂ ಪ್ರಭು ಗೆಜ್ಜೇಹಳ್ಳಿ ಎಂದು ಗುರುತಿಸಲಾಗಿದೆ.ಉದಯ ವಾರ್ತೆ ಗಾಂಜಾ ಸುದ್ದಿಯನ್ನು ಪ್ರಸಾರ ಮಾಡಿದ ನಂತರ ಗಾಂಜಾ ಕೇಸಗೆ ಬೆನ್ನತ್ತಿರುವ ಹುಬ್ಬಳ್ಳಿ ಪೋಲೀಸರು ಕಳೆದ ಎರಡು ದಿನದ ಹಿಂದೆ ಸಿಇಎನ್ ಪೋಲೀಸರೂ ಸಹ ಕುಸುಗಲ್ ರಸ್ತೆಯ ಬಿರಂಜ್ ಹೊಟೆಲ್ ಹತ್ತಿರ ಒಂದು ಗಾಂಜಾ ಕೇಸ್ ಪತ್ತೆ ಮಾಡಿದ್ದನ್ನ ಸ್ಮರಿಸಬಹುದು.
ಉದಯ ವಾರ್ತೆ ಹುಬ್ಬಳ್ಳಿ.