ನಾಳೆ ಧಾರವಾಡದಲ್ಲಿ ವಿಶೇಷ ಚೇತನರಿಗಾಗಿ ದಾಖಲೆಯ ತ್ರಿಚಕ್ರ ವಾಹನಗಳ ವಿತರಣೆ. ಸಚಿವ ಸಂತೋಷ್ ಲಾಡ್ ರಿಂದ ದೊಡ್ಡ ಕಾರ್ಯಕ್ರಮ.

Share to all

ನಾಳೆ ಧಾರವಾಡದಲ್ಲಿ ವಿಶೇಷ ಚೇತನರಿಗಾಗಿ ದಾಖಲೆಯ ತ್ರಿಚಕ್ರ ವಾಹನಗಳ ವಿತರಣೆ. ಸಚಿವ ಸಂತೋಷ್ ಲಾಡ್ ರಿಂದ ದೊಡ್ಡ ಕಾರ್ಯಕ್ರಮ.

ಧಾರವಾಡ:-ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮೊದಲಿಂದಲೂ ಬಹಳ‌ ಕ್ರಿಯಾಶೀಲ ಹಾಗೂ ಜನಮುಖಿ ಕೆಲಸಗಳಿಗಾಗಿ ಜನಪ್ರಿಯತೆ ಪಡೆದವರು. ಅಧಿಕಾರದಲ್ಲಿರಲಿ ಇರದಿರಲಿ ಸಂತೋಷ್ ಲಾಡ್ ಮಾತ್ರ ಒಂದಿಲ್ಲೊಂದು ಜನಸೇವೆಯಲ್ಲಿ ತೊಡಗಿರ್ತಾರೆ.

ತಮ್ಮ ಫೌಂಡೇಶನ್ ಮೂಲಕ ಸಾವಿರಾರು ಜನರ ಬಾಳು ಬೆಳಗಿರುವ ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾದ ಮೇಲಂತೂ ಇಲಾಖೆಯಲ್ಲಿ ಹಲವಾರು ಕ್ರಾಂತಿಕಾರಕ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅವುಗಳ ಸಾಲಿಗೆ ನಾಳೆ ಧಾರವಾಡದಲ್ಲಿ ನಡೆಯುತ್ತಿರುವ ಕಾರ್ಯಕ್ರಮವೂ ಸೇರಲಿದೆ.

ಹೌದು ರಾಜ್ಯದ ಯಂಗ್ & ಎನರ್ಜಟಿಕ್ ಲೀಡರ್ ಅಂತ ಹೆಸರು ಪಡೆದಿರೋ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಧಾರವಾಡದ ಕೆಸಿಡಿ ಮೈದಾನದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೀತಿದೆ. ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯಿಂದ ಸುಮಾರು 525 ವಿಶೇಷ ಚೇತನರಿಗೆ ಮೋಟಾರ್ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗ್ತಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತ್ರಿಚಕ್ರ ವಾಹನಗಳ ವಿತರಣೆ ನಡೆಯುತ್ತಿದೆ ಎಂದು ಹೇಳಲಾಗ್ತಿದೆ. ಅಲ್ಲದೇ ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಕೂಡ 25 ತ್ರಿಚಕ್ರ ವಾಹನಗಳನ್ನು ವಿತರಿಸಲಾಗ್ತಿರೋದು ಮತ್ತೊಂದು ವಿಶೇಷ.

ಇನ್ನು ಇದೇ ಕಾರ್ಯಕ್ರಮದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ಗಳನ್ನು ಸಹ ವಿತರಿಸಲಾಗುತ್ತಿದೆ. ಹಾಗೆಯೇ ರಾಜ್ಯದ ಗಿಗ್ ಕಾರ್ಮಿಕರು ಹಾಗೂ ಪತ್ರಿಕಾ ವಿತರಕ ಕಾರ್ಮಿಕರ ವಿಮಾ ಯೋಜನಾ ಚಾಲನಾ ಸಮಾರಂಭ ಕೂಡ ನಡೆಯಲಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ನಾಳೆ ಸಂಜೆ 6 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರಿಂದ ಸಂಗೀತ ಸಂಜೆ ಹಾಗೂ ಹಲವಾರು ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರೋದು ಮತ್ತೊಂದು ವಿಶೇಷ.

ಕಾರ್ಮಿಕ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗಿಂದ ಈ ವರೆಗೆ ಆಗಲಾರದ ಅದೆಷ್ಟೋ ಕೆಲಸಗಳನ್ನು ಲಾಡ್ ಕೈಗೆತ್ತಿಕೊಂಡಿರೋದು ವಿಶೇಷ. ಮೊದಲಿಂದಲೂ ಶ್ರಮ ಜೀವಿಗಳನ್ನು ಕಂಡರೆ ಲಾಡ್ ಅವರಿಗೆ ಅದೇನೋ ವಿಶೇಷ ಪ್ರೀತಿ. ಅವರ ಕಲ್ಯಾಣಕ್ಕಾಗಿ ಸಂತೋಷ್ ಲಾಡ್ ಅವಿರತವಾಗಿ ಶ್ರಮಿಸುತ್ತಿರೋದು ವ್ಯಾಪಕ ಶ್ಲಾಘನೆಗೆ ಒಳಗಾಗ್ತಿದೆ. ಇನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗಣನೀಯ ಸೇವೆ ಸಲ್ಲಿಸುತ್ತಿರೋ ಲಾಡ್ ಭ್ರಷ್ಟ, ಸೋಮಾರಿ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿ, ಜನ ಸಾಮಾನ್ಯರ ಪಾಲಿಗೆ ಆಪ್ತರಕ್ಷಕನಾಗಿ ಕೆಲಸ ನಿರ್ವಹಿಸುತ್ತಿರೋದು ಜಿಲ್ಲೆಯ ಜನರಿಗೆ ಲಾಡ್ ಅವರ ಮೇಲೆ ವಿಶೇಷ ಗೌರವ ಮೂಡಿಸಿದೆ.

ಇನ್ನು ಸಂತೋಷ್ ಲಾಡ್ ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಎಲ್ಲ ವರ್ಗಗಳ, ಸಮುದಾಯಗಳ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಒಳಿತಿಗಾಗಿ, ರೈತರ ಒಳಿತಿಗಾಗಿ ಮಾಡುತ್ತಿರುವ ಸೇವೆ, ಸಹಾಯ ಹಸ್ತಗಳು ಲಾಡ್ ಶ್ರೇಯಸ್ಸನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author