ಧಾರವಾಡ ಲೋಕಸಭಾ ಚುನಾವಣೆ ಟಿಕೆಟ್ ಪೈಟ್. 17 ಜನರಿಂದ ಅರ್ಜಿ.ಗೆಲ್ಲುವವರಿಗೆ ಟಿಕೆಟ್ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ.

Share to all

!!!!ಧಾರವಾಡ ಲೋಕಸಭಾ ಚುನಾವಣೆ ಟಿಕೆಟ್ ಪೈಟ್.
17 ಜನರಿಂದ ಅರ್ಜಿ.ಗೆಲ್ಲುವವರಿಗೆ ಟಿಕೆಟ್ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ.!!!!

ಹುಬ್ಬಳ್ಳಿ:-ಒಂದು ಕಾಲದಲ್ಲಿ ಧಾರವಾಡ ಲೋಕಸಭೆಗೆ ಎಂದರೆ ಬೇಡಪ್ಪ ಬೇಡ ಎಂದು ದೂರ ಸರಿಯುವ ಟಿಕೆಟ್‌ಗೆ ಈ ಬಾರಿ ಪೂಲ್ ಡಿಮ್ಯಾಂಡ್ ಬಂದಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌‌ಗಾಗಿ ಬರೋಬ್ಬರಿ 17 ಜನ ಅರ್ಜಿ ಸಲ್ಲಿಸಿದ್ದು ಎಲ್ಲರೂ ನನಗೆ ಟಿಕೆಟ್ ಕೊಡಿ ಎಂದು ಸಚಿವರಿಗೆ ದುಂಬಾಲು ಬಿದ್ದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎದುರು ತೊಡೆ ತಟ್ಟಲು ನಾ ಮುಂದು ತಾ ಮುಂದು ಎಂದು ಅರ್ಜಿಸಲ್ಲಿಸಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆಯ ಕೈ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆದಿದೆ.ನಿನ್ನೆ ನಡೆದ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ 17 ಜನ ಟಿಕೆಟ್ ಆಕಾಂಕ್ಷಿ‌ಗಳು ಅರ್ಜಿ ಸಲ್ಲಿಸಿದ್ದಾರೆ.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕಿಯಾಗಿರುವುದರಿಂದ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಯಾರಿಗೆ ಟಿಕೆಟ್ ನೀಡಬೇಕೆಂದು ಅಭಿಪ್ರಾಯ ಸಂಗ್ರಹಿಸಲು ನಿನ್ನೆ ಧಾರವಾಡದ ಖಾಸಗಿ ಹೋಟೆಲ್‌ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಭೆ ಕರೆದಿದ್ದರು.

ಸಭೆಯಲ್ಲಿ ಸಚಿವ ಸಂತೋಷ ಲಾಡ್, ಶಾಸಕರು, ಮಾಜಿ‌ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ವಿಧಾನ ಪರಿಷತ್, ಕೆಪಿಸಿಸಿ ಸದಸ್ಯರು ಸೇರಿದಂತೆ ಹಲವು ಮುಖಂಡರು ಹಾಗೂ ಆಕಾಂಕ್ಷಿತರು ಭಾಗಿಯಾಗಿದ್ದರು.
ಸುಧೀರ್ಘ ಎರಡೂ ಗಂಟೆಗಳ ಕಾಲ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲರ ಅರ್ಜಿ ಪರಿಶೀಲನೆ ಮಾಡಿ ಪಟ್ಟಿಯನ್ನ ಹೈ ಕಮಾಂಡಗೆ ಕಳಿಸ್ತೇವಿ ಮತ್ತು ಗೆಲ್ಲುವವರಿಗೆ ಟಿಕೆಟ್ ನೀಡ್ತೇವಿ ಎಂದಿದ್ದಾರೆ.

ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿರುವ ಕಾಂಗ್ರೆಸ್.
ಗ್ಯಾರಂಟಿ‌ಗಳಿಂದ ಜನರಲ್ಲಿ ನಂಬಿಕೆ ಉಳಿಸಿಕೊಂಡ ಚುನಾವಣೆ ಎದುರಿಸಲಿ ಸಿದ್ಧವಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author