ಹುಬ್ಬಳ್ಳಿಯಲ್ಲಿ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಸಿಎಮ್ ಸಿದ್ದರಾಮಯ್ಯ.
ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ನಿಮಿತ್ತ ಶುಭಕೋರಿದ ಸಿಎಮ್.
ಹುಬ್ಬಳ್ಳಿ:- ಇಂದು ಸಿಎಂ ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮನೆಗೆ ಭೇಟಿ ನೀಡಿದರು.ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ
ಶೆಟ್ಟರ್ ಕುಟುಂಬದೊಂದಿಗೆ ಉಪಹಾರ ಸೇವಿಸಿದರು.ಅಲ್ಲದೇ ಜಗದೀಶ ಶೆಟ್ಟರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಜಗದೀಶ ಶೆಟ್ಟರಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಇತ್ತೀಚೆಗೆ ಪಂಚರಾಜ್ಯ ಚುನಾವಣೆಗಳ ಪಲಿತಾಂಶ ಬಂದ ನಂತರ ಜಗದೀಶ.ಶೆಟ್ಟರ ಮತ್ತೇ ಬಿಜೆಪಿಗೆ ಹೋಗ್ತಾರೆ ಅಂತಾ ಗುಸು ಗುಸು ಸುದ್ದಿ ಹರಿದಾಡತಿತ್ತು ಅಲ್ಲದೇ ವಿಜಯೇಂದ್ರ ರಾಜ್ಯ ಬಿಜೆಪಿ ಅದ್ಯಕ್ಷರಾದ ನಂತರ ಶೆಟ್ಟರ ಬಿಜೆಪಿಗೆ ಅಂತಾ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಇಂದು ಸಿಎಂ ಜಗದೀಶ.ಶೆಟ್ಟರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ