ಶಿಕ್ಷಕನೊಬ್ಬನಿಂದ ಅಮಾನವೀಯ ಕೃತ್ಯ.
ಶಾಲಾ ಮಕ್ಕಳ ಪ್ಯಾಂಟ್ ಬಿಚ್ಚಿಸಿ ವಿಕೃತಿ ಮೆರೆಯುತ್ತಿದ್ದ ಶಿಕ್ಷಕ.
ಬೀದರ:-ಬೀದರ್ ಜಿಲ್ಲೆಯ ಪ್ರೌಢ ಶಾಲೆಯೊಂದರಲ್ಲಿಯ ಶಿಕ್ಷಕ ಶಾಲಾ ಮಕ್ಕಳ ಪ್ಯಾಂಟ ಬಿಚ್ಚಿಸಿ ವಿಕ್ರತಿ ಮೆರೆಯುತ್ತಿದ್ದ ಅಮಾನವೀಯ ಕೃತ್ಯ ನಡೆದಿದೆ.
ಖಾಸಗಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ರಮೇಶ ಎಂಬುವವರಿಂದ ಹೇಯ ಕೃತ್ಯ ನಡೆದಿದ್ದು.
10 ನೇ ತರಗತಿ ಮಕ್ಕಳ ಪ್ಯಾಂಟ್ ಹಾಗೂ ಒಳಉಡುಪು ಬಿಚ್ಚಿಸಿ ಓಡಿಸುತ್ತಿದ್ದ ಅಲ್ಲದೇ
ವಿದ್ಯಾರ್ಥಿಗಳಿಗೆ ಪರಸ್ಪರ ಗುಪ್ತಾಂಗ ಮುಟ್ಟಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದನಂತೆ ಅಲ್ಲದೇಸಾಯಂಕಾಲ ಶಾಲಾ ಬಿಡುವಿನ ನಂತರ ಮಕ್ಕಳಿಗೆ ವಿಚಿತ್ರ ಪಾಠ ಮಾಡ್ತಿದ್ದನಂತೆ.
ಹೇಳಿದಂತೆ ಮಾಡದೇ ಹೋದರೆ ಅವಾಚ್ಯ ಪದಬಳಸಿ ಹೊಡೆಯುತ್ತಿದ್ದ ಶಿಕ್ಷಕನ ವಿರುದ್ದ ಪೊಕ್ಸೊ ಖಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು
ಶಿಕ್ಷಕನನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉದಯ ವಾರ್ತೆ ಬೀದರ