ಅಣ್ಣನಿಂದ ತಮ್ಮನ ಭೀಕರ ಕೊಲೆ.ತಡ ರಾತ್ರಿ ಚುಚ್ಚಿ ಕೊಲೆ.ಆರೋಪಿ ಅಣ್ಣ ಆರೆಸ್ಟ್.
ಹುಬ್ಬಳ್ಳಿ:-ಅವರಿಬ್ಬರೂ ಜೋಡಿ ಹಕ್ಕಿಗಳ ತರಹ ಇದ್ದ ಅಣ್ಣ ತಮ್ಮಂದಿರು. ಅದೇಕೋ ನಿನ್ನೆ ರಾತ್ರಿ ಅಣ್ಣಾ,ತಮ್ಮನನ್ನು ಚಾಕುವಿನಿಂದ ಎಲ್ಲೆ ಬೇಕೆಂದರಲ್ಲಿ ಇರಿದು ಭೀಕರ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಚಂದ್ರನಾಥ ನಗರದಲ್ಲಿ ಬಾಡಿಗೆ ರೂಮಿನಲ್ಲಿದ್ದ ಅಣ್ಣ ರಾಜು ಪಾಂಡುಸಾ ಕಟವಟೆ.ಅವರ ತಮ್ಮ ಪವನ ಪಾಂಡುಸಾ ಕಟವಟೆ ಅನ್ನುವರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ನಿನ್ನೆ ತಡ ರಾತ್ರಿ ಹನ್ನೆರಡು ಘಂಟೆಯ ಸುಮಾರಿಗೆ ರೂಮಿಗೆ ಬಂದ ಅಣ್ಣ ರಾಜು ಅವರ ತಮ್ಮ ಪವನ ಜೊತೆಗೆ ಮದುವೆ ವಿಚಾರವಾಗಿ ಜಗಳ ಮಾಡತಾ ಕೋಪದಲ್ಲಿ ತಮ್ಮನಿಗೆ ಮೈ ತುಂಬಾ ಚಾಕು ಹಾಕಿ ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿ ರಾಜುನನ್ನು ಈಗಾಗಲೇ ಅಶೋಕ ನಗರ ಪೋಲೀಸರು ಆರೆಸ್ಟ್ ಮಾಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ