ಹುಬ್ಬಳ್ಳಿಯಲ್ಲಿ ಬೈಕ್ ಪುಂಡರ ಹಾವಳಿ.
ನಡು ರಸ್ತೆಯಲ್ಲಿಯೇ ಬೈಕ್ ವ್ಹೀಲಿಂಗ್ ಮಾಡ್ತಿರೋ ಪುಂಡರು.
ಹುಬ್ಬಳ್ಳಿ:-ಹುಬ್ಬಳ್ಳಿ ವಿದ್ಯಾನಗರ ಅಂದರೆ ಅಲ್ಲಿ ಶಾಲಾ,ಕಾಲೇಜುಗಳ ಸಂಖ್ಯೆ ಹೆಚ್ಚೇ ಅಲ್ಲಿ ಯಾವಾಗ ನೋಡಿದರೂ ವಿದ್ಯಾರ್ಥಿಗಳಿಂದಲೇ ತುಂಬಿ ತುಳುಕುತ್ತಿರುತ್ತದೆ.ಅಂತಹದರಲ್ಲಿ ಬೈಕ್ ವ್ಹೀಲಿಂಗ್ ಮಾಡೋರ ಪುಂಡರ ಹಾವಳಿ ನೋಡಿದರೆ ನೀವು ಬೆಚ್ಚಿ ಬೀಳ್ತೀರಾ ಅದೇನಂತೀರಾ ಇಲ್ಲಿದೆ ನೀವೇನೋಡಿ.
ಬೈಕ್ ನಂಬರ್ ಪ್ಲೇಟ್ ಹಾಕದೆ ನಡು ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿರೋ ಯುವಕರು ಯಾರ ಅಂಜಿಕೆಯಿಲ್ಲದೆಯೂ ಈ ಬೈಕ್ ವ್ಹೀಲಿಂಗ್ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.ಹುಬ್ಬಳ್ಳಿಯ ವಿದ್ಯಾನಗರ, ನಡುರಸ್ತೆಯಲ್ಲಿಯೇ ಬೈಕ್ ಪುಂಡರ ಹಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಡು ರಸ್ತೆಯಲ್ಲಿ ಯುವಕರ ಹುಚ್ಚಾಟ ಕಂಡ್ರೂ ಕಾಣದಂತಿರೋ ವಿದ್ಯಾನಗರ ಪೊಲೀಸರು ಇಂತವರ ಬಗ್ಗೆ ಕ್ರಮಕೈಕೊಳ್ಳದೇ ಅವರ ಕೆಲಸನೇ ಬೇರೇ ಅನ್ನೋತರ ಕೆಲಸ ಮಾಡತಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.