ವಿದ್ಯಾರ್ಥಿನಿಯರ ಹಾಸ್ಟೆಲ್ ನ ಬಾತ್ರೂಮ್ ನಲ್ಲಿ ಕ್ಯಾಮೆರಾ ಇಟ್ಟ ಕಾಮುಕ.ಕಾಮುಕನ ಹಿಡಿದು ಥಳಿಸಿದ ಹಾಸ್ಟೆಲ್ ವಿದ್ಯಾರ್ಥಿಗಳು.
ಕಲಬುರ್ಗಿ:-ಜೇವರ್ಗಿ ತಾಲೂಕಿನ ಶಾಂತನಗರದ ಅಲ್ಪಸಂಖ್ಯಾತರ ಹಾಸ್ಟೆಲ್ ನಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಯರ ಬಾತ್ ರೂಮಿನಲ್ಲಿ ಕ್ಯಾಮಾರಾ ಇಟ್ಟು ವಿದ್ಯಾರ್ಥಿನಿಯರಿಂದಲೇ ಒದೆ ತಿಂದ ಘಟನೆ ಜರುಗಿದೆ.
ಸಲೀಂ ಎನ್ನುವ ಕಾಮುಕನಿಂದಲೇ ಇಂತಹ ಹೇಯಾ ಕೃತ್ಯ ನಡೆದಿದ್ದು
ಕಾಮುಕನಿಗೆ ಹಿಡಿದು ಥಳಿಸುತ್ತಿದ್ದಂತೆ,ಸ್ಥಳೀಯರ ಸಹಾಯದಿಂದ ಸಲೀಂ ಎಸ್ಕೇಪ್ ಆಗಿದ್ದ.
ಸ್ಥಳೀಯರ ಸಹಾಯದಿಂದ ತಹಶಿಲ್ದಾರ ಹಾಗೂ ಜೇವರ್ಗಿ ಪೊಲೀಸರಿಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದರು.ಎಸ್ಕೇಪ್ ಆಗಿದ್ದ ಸಲೀಂನನ್ನು ಹಿಡಿದು ಠಾಣೆಗೆ ತಂದು ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉದಯ ವಾರ್ತೆ ಕಲಬುರ್ಗಿ