ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ. ಸ್ಥಳದಲ್ಲಿಯೇ ನಾಲ್ವರ ಸಾವು.
ಕಲಬುರಗಿ:-ಇಂದು ಬೆಳಗಿನ ಜಾವಾ ಲಾರಿ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಲಬುರಗಿಯ ಅಫಜಲಪುರ ಬಳಿ ನಡೆದಿದೆ.
ಕಲಬುರಗಿ ಕಡೆಯಿಂದ ಹೊರಟಿದ್ದ ಲಾರಿಗೆ ಅಪಜಲಪುರ ಕಡೆಯಿಂದ ಬರುತ್ತಿದ್ದ ಜೀಪ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಜೀಪಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಮ್ರತರೆಲ್ಲರೂ ಅಪಜಲಪುರದವರು ಎನ್ನಲಾಗಿದೆ.ಸ್ಥಳಕ್ಕೆ ಅಪಜಲಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದಯ ವಾರ್ತೆ ಕಲಬುರಗಿ