ನಿನ್ನೆ ಇದ್ದ ಪುಟ್ಟ ಬಾಲಕ ಇಂದಿಲ್ಲಾ.ಮಗುವಿನ ಸಾವಿಗೆ ಲಸಿಕೆ ಕಾರಣ ಅಂತೆ..!!
ಹುಬ್ಬಳ್ಳಿ:-ಹೌದು ಆತನಿಗೆ ಇನ್ನೂ ಅಪ್ಪ,ಅಮ್ಮ ಅನ್ನಲು ತೊದಲುವ ವಯಸ್ಸು.ಆದರೆ ಆ ಎರಡು ವರ್ಷದ ಪುಟ್ಟ ಬಾಲಕ ಬಾಯಿ ತುಂಬಾ ಅಪ್ಪ,ಅಮ್ಮ ಅನ್ನುವ ಮೊದಲೆ ಆ ತಂದೆ ತಾಯಿಯನ್ನ ಬಿಟ್ಟು ಹೋಗಿದ್ದಾನೆ.ಆ ಸ್ಟೋರಿ ಏನಂತೀರಾ ಹೇಳ್ತೇವಿ ನೋಡಿ.
ಆ ಎರಡು ವರ್ಷದ ಪುಟ್ಟ ಬಾಲಕನ ಹೆಸರು ದ್ರುವ ಅಂತಾ.ಅವರ ತಂದೆ ಕಂಡಕ್ಟರ್ ತಾಯಿ ಇನ್ನೂ ನರ್ಸಿಂಗ್ ಓದತಾ ಇದ್ದಾರೆ.ಆ ಪುಟ್ಟ ಬಾಲಕ ನಿನ್ನೆ ಅಜ್ಜ ಅಮ್ಮನ ಮನೆಯಲ್ಲಿ ನಗು ನಗುತಾ ಓಡಾಡಿಕೊಂಡಿತ್ತು.ಇದೆಲ್ಲದರ ನಡುವೆ ಅಂಗನವಾಡಿಗೆ ಹೋಗಿ ಎರಡು ವರ್ಷದ ಲಸಿಕೆ ಹಾಕಿಸಿಕೊಂಡು ಬಂದಿದ್ದಾರೆ.ಆ ಲಸಿಕೆ ರಿಯಾಕ್ಷನ್ ಆಗಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ನಿನ್ನೆ ಹುಬ್ಬಳ್ಳಿಯ ತಾಜ್ ನಗರದ ಅಂಗನವಾಡಿಯಲ್ಲಿ ಲಸಿಕೆ ಹಾಕಿಸಿಕೊಂಡು ಬಂದ ಮೇಲೆ ಮಗುವಿನ ಆರೋಗ್ಯ ಏರು ಪೇರು ಆಗಿತ್ತಂತೆ.ಇಂದು ಮದ್ಯಾಹ್ನ ಮಗುವಿನ ಅಜ್ಜಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವುದರೊಳಗಾಗಿ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಹೀಗಾಗಿ ಮಗುವಿನ ಅಜ್ಜಿಯ ಆಕ್ರಂದನ ಕಿಮ್ಸನಲ್ಲಿ ಮುಗಿಲು ಮುಟ್ಟಿತ್ತು.
ಒಟ್ಟಾರೆ ಇನ್ನೂ ಜಗತ್ತನ್ನೇ ಅರಿಯದ ಆ ಪುಟ್ಟು ಬಾಲಕನ ಸಾವಿಗೆ ಹೊಣೆಗಾರರು ಯಾರು..?
ಉದಯ ವಾರ್ತೆ ಹುಬ್ಬಳ್ಳಿ.