ತಿಮಿಂಗಲಗಳನ್ನ ಬಿಟ್ಟು,ಅಮಾಯಕ ಅಧಿಕಾರಿಗಳ ಸಸ್ಪೆಂಡ್ ಮಾಡಿದರಾ..?
ಹೆಸ್ಕಾಂ ನಡೆ ಪ್ರಶ್ನಾತೀತ.
ಹುಬ್ಬಳ್ಳಿ:- ಕಳೆದ ಮೂರು ದಿನಗಳ ಹಿಂದೆ ಹುಬ್ಬಳ್ಳಿ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಸ್ಟೋರನಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂದಿಸಿದಂತೆ ಐವರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ದಾರೆ.
ಅಮಾನತ್ತುಗೊಂಡವರು ಸಹಾಯಕ ಕಾರ್ಯನಿರ್ವಾಹಕ ಇಂಜನೀಯರಗಳಾದ ವಸಂತ ಕುಮಾರ ರಾಠೋಡ,ವಿಶ್ವನಾಥ ಶಿರಹಟ್ಟಿಮಠ,ಅಂಜಿನಪ್ಪ.ಅಕೌಂಟ್ಂಟ್ ಬೆಂಜಿಮಿನ್,ಹಾಗೂ ಸಹಾಯಕ ಲೆಕ್ಕಾಧಿಕಾರಿ ಯು.ಎಸ್.ಉಳ್ಳಾಗಡ್ಡಿಮಠ.
ಹುಬ್ಬಳ್ಳಿ ಹೆಸ್ಕಾಂ ಸ್ಟೋರ ವ್ಯಾಪ್ತಿ ಬೆಳಗಾವಿ, ಕಾರವಾರ,ಗದಗ ಹಾಗೂ ಹಾವೇರಿ ಜಿಲ್ಲೆಗಳು ಬರುತ್ತವೆ.ಈ ಹಿಂದೆ ಸ್ಟೋರ್ ಕೀಪರ ಆಗಿದ್ದ. ಬಸವರಾಜ ಮಳೆಮಠ ಅವರ ಅವದಿಯಲ್ಲಿ 71 ಕೋಟಿ ಅವ್ಯವಹಾರ ಆಗಿದೆ ಎಂದು ಕೇಳಿ ಬಂದಿತ್ತು.ಆದರೆ ಈ ಅವ್ಯವಹಾರಕ್ಕೆ ಸಂಬಂದಿಸಿದಂತೆ ಹೆಸ್ಕಾಂ ಐವರು ಅಧಿಕಾರಿಗಳ ನೇತ್ರತ್ವದಲ್ಲಿ ತನಿಖೆ ಮಾಡಿಸಿ 51 ಕೋಟಿ ಅವ್ಯವಹಾರ ಆಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಐವರನ್ನ ಅಮಾನತ್ತು ಮಾಡಿದ್ದು ಅವರ ಕಾರ್ಯವೈಕರಿಯನ್ನ ಮೆಚ್ಚಲೇ ಬೇಕು.ಆದರೆ ಈ ಬ್ರಷ್ಟಾಚಾರದ ಹಿಂದೆ ದೊಡ್ಡ ದೊಡ್ಡ ತಿಮಿಂಗಲುಗಳೇ ಇದ್ದಾರೆ ಎನ್ನುವ ವಾಸನೆ ಇದೆ.ಖಡಕ್ ವ್ಯವಸ್ಥಾಪಕ ನಿರ್ಧೇಶಕರು ಅದರ ಆಳ ಅಗಲ ಪತ್ತೆ ಹಚ್ಚಿ ತಿಮಿಂಗಲುಗಳನ್ನು ಬಲೆಗೆ ಹಾಕಿದರೆ ಹೆಸ್ಕಾಂಗೆ ಇನ್ನಷ್ಟು ಹೆಸರು ಬರುತ್ತದೆ ಅನ್ನೋದು ಇಲಾಖೆಯ ಕರ್ತವ್ಯನಿಷ್ಠ ಅಧಿಕಾರಿಗಳ ಆಸೆ.
ಉದಯ ವಾರ್ತೆ ಹುಬ್ಬಳ್ಳಿ