ಕೋಟಿ, ಕೋಟಿ ಆಸ್ತಿಯ ಹುಡುಗಿಯನ್ನ ಲಪಟಾಯಿಸಿದ ಕಡ್ಡಿಪೆಟಗಿ.ಮಂಟೂರ ರೋಡಿನ ಲವ್ ಕಹಾನಿಯಲ್ಲಿದೆ ರೋಚಕ ಕಹಾನಿ !!!
ಹುಬ್ಬಳ್ಳಿ:- ಪ್ರೀತಿ ಪ್ರೇಮ ಪ್ರಣಯ ಎಂದು ಹಗಲಲ್ಲು ಕನಸು ಕಾಣುವ ಹದಿಹರೆಯದ ಹುಡುಗಿಯರೇ ಈ ಸ್ಟೋರಿ ಒಮ್ಮೆ ನೋಡಲೇ ಬೇಕು. ನೋಡಿ ಹುಷಾರಾಗಿರಿ. ಯಾಕೆಂದರೆ ನಿಮ್ಮ ಆಸ್ತಿ ಅಂತಸ್ತು ನೋಡಿ ನಿಮ್ಮನ್ನ ಬುಟ್ಟಿಗೆ ಹಾಕಿಕೊಳ್ಳುವ ಪಡ್ಡೇ ಹುಡುಗರು ನಿಮ್ಮದೆ ಮನೆಯ ಬೀದಿಯ ಕೊನೆಯಲ್ಲಿ ನಿಮಗಾಗಿ ಸ್ಪೈಕ್ ಕಟಿಂಗ್ ಮಾಡಿಕೊಂಡು ಕಾದಿದ್ದಾರೆ.ಇದಕ್ಕೆ ಸಾಕ್ಷಿಯಾಗಿ ನಿಂತಿದೆ ಮಂಟೂರ ರೋಡನ ಲವ್ ಕಹಾನಿ.
ಅಷ್ಟಕ್ಕೂ ಆಗಿದ್ದೇನೆಂದರೆ ಮಂಟೂರ ರೋಡನಲ್ಲಿ ಮ್ಯಾ..ಸ್ ಎಂದೇ ಕುಖ್ಯಾತಿ ಪಡೆದಿರುವ ಗಾಂಜಾ ಗಿರಾಕಿಯೊಬ್ಬ ಕೋಟ್ಯಾಧಿಪತಿ ಮಗಳಿಗೆ ಕನ್ನ ಹಾಕಿದ್ದಾನೆ.ಇದೀಗ ತಾನೆ ಹದಿನೆಂಟು ಮುಗಿದಿರುವ ಸುಂದರಿಯನ್ನ ಪ್ರೀತಿಯ ನೆಪದಲ್ಲಿ ಓಡಿಸಿಕೊಂಡು ಹೋಗಿ ತಮ್ಮ ಧರ್ಮದ ಪದ್ಧತಿಯ ಪ್ರಕಾರ ಮದುವೆ ಆಗಿದ್ದಾನೆ.
ಮಗಳು ಸುಖವಾಗಿರಲಿ ಎಂದು ಅಪ್ಪ ಕೋಟ್ಯಾಂತರ ರೂಪಾಯಿ ಆಸ್ತಿ ಸಂಪಾದಿಸಿ ಮಗಳ ಹೆಸರಿಗೆ ಬರೆದು ಅಸುನೀಗಿದ್ದಾನೆ.ಯಾರೂ ದಿಕ್ಕಿಲ್ಲದ ಕೋಟಿ ಕೋಟಿ ಒಡತಿ ಇವಳೇ ಎಂಬುದು ಗೊತ್ತಾಗಿದ್ದೇ ತಡ ಮ್ಯಾ…ಸ್ ಕಡ್ಡಿ ಗೀರಿ ಬೆಂಕಿ ಹಚ್ಚಿದ್ದಾನೆ.
ಮ್ಯಾ…ಸ್ ಗಾಂಜಾ ಗಿರಾಕಿ,ಎಂಬುದು ಅರ್ಥವಾಗುವಷ್ಟಿಗೆ ಕೋಟಿಯ ಒಡತಿ ತಾಯಿಯಾಗಿರುತ್ತಾಳೆ.ಸಪ್ತಪದಿ ತುಳಿದ ಪತ್ನಿಯ ಹೆಸರಿಗೆ ಆಸ್ತಿ ಮಾಡದ ಗಂಡ ಮಗಳ ಹೆಸರಿಗೆ ಆಸ್ತಿ ಮಾಡಿ ಪತ್ನಿಯ ಪಾಲಿಗೆ ದುರಂತ ನಾಯಕನಾಗಿದ್ದಾನೆ.
ಆದರೆ ತಪ್ಪೂ ಸರಿಯೋ ಗೊತ್ತಿಲ್ಲಾ. ಪೋಲೀಸ ಠಾಣೆಗೆ ಯುವತಿಯ ತಾಯಿ ದೂರು ಕೊಡಲು ಹೋದರೆ ಪೋಲೀಸರು ಈ ಲವ್ ಕಹಾನಿಯನ್ನ ಠಾಣೆಯ ಮೆಟ್ಟಿಲ ಹತ್ತಿರಕ್ಕೂ ಬಿಟ್ಟುಕೊಳ್ಳುವುದರ ಹಿಂದೆ ಇದ್ದಾನೊಬ್ಬ ಎಂಡಿ ಎಂದು ಹೇಳಬೇಕಿಲ್ಲಾ.
ಉದಯ ವಾರ್ತೆ ಹುಬ್ಬಳ್ಳಿ