PSI ಅಮಾನತು – ಅಪಘಾತ ಪ್ರಕರಣದಲ್ಲಿ ವಾಹನವನ್ನು ಬದಲಾವಣೆ ಮಾಡಿದ ಲೇಡಿ ಪಿಎಸ್ಐ ಗೆ ಅಮಾನತು ಶಿಕ್ಷೆ ನೀಡಿದ ಎಸ್ಪಿ
ಹಾವೇರಿ –
ಕರ್ತವ್ಯ ಲೋಪ ಹಿನ್ನಲೆಯಲ್ಲಿ ಮಹಿಳಾ ಪಿಎಸ್ಐ ರೊಬ್ಬರನ್ನು ಅಮಾನತು ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ಪೊಲೀಸ್ ಠಾಣೆ ಪಿಎಸ್ ಐ ಸುಜಾತ ಪಾಟೀಲ್ ಅಮಾನತುಗೊಂಡವರಾಗಿದ್ದಾರೆ.ಹಾವೇರಿ ಎಸ್ ಪಿ ಅಂಶುಕುಮಾರ ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ.ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಅಮಾನತು ಮಾಡಿದ್ದಾರೆ.ಅಕ್ಟೋಬರ್‌ನಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ವಾಹನ ಬದಲಾವಣೆ ಮಾಡಿದ ಆರೋಪ ಕೇಳಿ ಬಂದಿತ್ತು.ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ.
ಉದಯ ವಾರ್ತೆ ತಡಸ