ಹಿರಿಯ ಮೂವರು ಶಾಸಕರಿಗೆ ವಿಶೇಷ ಹುದ್ದೆ ಸೃಷ್ಟಿ ಮಾಡಿದ ಕಾಂಗ್ರೇಸ್ ಪಕ್ಷ – ಆಗಾಗ ಸರ್ಕಾರದ ವಿರುದ್ದ ಚಾಟಿ ಬೀಸುತ್ತಿದ್ದ ಶಾಸಕರನ್ನು ತಣ್ಣಗೆ ಮಾಡಿದ ಹೈಕಮಾಂಡ್

Share to all

ಹಿರಿಯ ಮೂವರು ಶಾಸಕರಿಗೆ ವಿಶೇಷ ಹುದ್ದೆ ಸೃಷ್ಟಿ ಮಾಡಿದ ಕಾಂಗ್ರೇಸ್ ಪಕ್ಷ – ಆಗಾಗ ಸರ್ಕಾರದ ವಿರುದ್ದ ಚಾಟಿ ಬೀಸುತ್ತಿದ್ದ ಶಾಸಕರನ್ನು ತಣ್ಣಗೆ ಮಾಡಿದ ಹೈಕಮಾಂಡ್

ಬೆಂಗಳೂರು –

ಹೌದು ರಾಜ್ಯದಲ್ಲಿ ಹೊಸದಾಗಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಆಗಾಗ ಅವರದೇ ಸರ್ಕಾರದ ವಿರುದ್ದ ಚಾಟಿಯನ್ನು ಬೀಸುತ್ತಿದ್ದ ಮೂವರು ಶಾಸಕರಿಗೆ ಕಾಂಗ್ರೇಸ್ ಪಕ್ಷವು ವಿಶೇಷ ಹುದ್ದೆಗಳನ್ನು ಸೃಷ್ಟಿ ಮಾಡಿದೆ.ರೆಬೆಲ್ ಶಾಸಕರನ್ನು ತಣಿಸಲು ಹಿರಿಯ ಕಾಂಗ್ರೆಸ್ ಶಾಸಕರಿಗೆ ಮಣೆ ಹಾಕೋ ಕೆಲಸವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದಾರೆ.ಈ ರೆಬೆಲ್ ಶಾಸಕರಿಗೆ ವಿಶೇಷ ಹುದ್ದೆಗಳನ್ನು ಸೃಷ್ಠಿ ಮಾಡಿ ಹಂಚಿಕೆ ಮಾಡಿ ಆದೇಶಿಸಿದ್ದಾರೆ.ಈ ಕುರಿತಂತೆ ರಾಜ್ಯ ಸರ್ಕಾರ ಕೂಡಾ ಆದೇಶವನ್ನು ಮಾಡಿದೆ.ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿಯವರ ಸಲಹೆಗಾರರನ್ನಾಗಿ ಕಲಬುರ್ಗಿ ಜಿಲ್ಲೆಯ ಅಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿದೆ.ಈ ಮೂವರಿಗೆ ಸಂಪುಟ ದರ್ಜೆಯ ಸ್ಥಾನವನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಉದಯ ವಾರ್ತೆ ಬೆಂಗಳೂರು


Share to all

You May Also Like

More From Author