ಕಾಂಗ್ರಸ್ ಮುಖಂಡ ವಿನೋದ ಅಸೂಟಿಗೆ ನಿಗಮ ಮಂಡಳಿ ಅದ್ಯಕ್ಷ ಸ್ಥಾನ ಕೊಡಿ.ಶಾಸಕ ಕೋನರೆಡ್ಡಿ ಸಿಎಂಗೆ ಪತ್ರ..
ಹುಬ್ಬಳ್ಳಿ:-ನವಲಗುಂದ ಮತ ಕ್ಷೇತ್ರದ ಕಾಂಗ್ರೆಸ್ ಯುವ ನಾಯಕ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಯುವ ಘಟಕದ ಅದ್ಯಕ್ಷ ವಿನೋದ ಅಸೂಟಿ ಅವರಿಗೆ ನಿಗಮ ಮಂಡಳಿಯಲ್ಲಿ ಅದ್ಯಕ್ಷ ಸ್ಥಾನ ನೀಡಬೇಕೆಂದು ನವಲಗುಂದ ಕ್ಷೇತ್ರದ ಶಾಸಕ ಎನ್ ಎಚ್ ಕೋನರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಎರಡು ಬಾರಿ ನವಲಗುಂದ ಕ್ಷೇತ್ರದ ಶಾಸಕರಾಗಿರುವ ಎನ್ ಎಚ್ ಕೋನರೆಡ್ಡಿ ಅವರು ಸ್ವತ:ಮುಖ್ಯಮಂತ್ರಿಗಳನ್ನ ಭೇಟಿಯಾಗಿ ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಬೇಡಾ.ನನ್ನ ಕ್ಷೇತ್ರದ ಯುವ ಮುಖಂಡ ವಿನೋದ ಅಸೂಟಿ ಅವರಿಗೆ ಅದ್ಯಕ್ಷ ಸ್ಥಾನ ಕೊಡಿ ಎಂದು ಹೇಳಿದ್ದಾರೆ.ಅಲ್ಲದೇ ಈಗ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಪಕ್ಷದಲ್ಲಿ ಸಾಕಷ್ಟು ದಿನಗಳಿಂದ ಸಂಘಟನೆ ಮಾಡಿದವರಿಗೆ ಸ್ಥಾನಮಾನ ಕೊಡಲಿ ನನ್ನನ್ನು ಶಾಸಕರನ್ನಾಗಿ ಮಾಡಿದ್ದಾರೆ ಅಷ್ಟೇ ಸಾಕು ಅವಕಾಶ ಸಿಕ್ಕರೆ ಮುಂದೊಂದು ದಿನ ಕ್ರಷಿ ಮಂತ್ರಿ ಮಾಡಲಿ ಎಂದು ಕೋನರೆಡ್ಡಿ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.