ರಾಜಕೀಯ ಡೊಂಬರಾಟದಲ್ಲಿ ಪ್ರಭಾವಿ ಸಚಿವನ ಕಾಲಿಗೆ ನಮಸ್ಕರಿಸಲು ಮುಂದಾದ ಈಶ್ವರಪ್ಪ.ನಯವಾಗಿ ತಿರಸ್ಕರಿಸಿದ ಸಚಿವ ಜೋಶಿ.
ಹುಬ್ಬಳ್ಳಿ:-ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆಗೆ ದಿಢೀರ್ ಭೇಟಿ ನೀಡಿದ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಾಲಿಗೆ ನಮಸ್ಕರಿಸಲು ಮುಂದಾದ ಘಟನೆ ನಡೆಯಿತು.
ಆದರೆ ಪ್ರಲ್ಹಾದ ಜೋಶಿ, ಈಶ್ವರಪ್ಪ ಕಾಲಿಗೆ ನಮಸ್ಕರಿಸುವ ನಡೆಯನ್ನು ನಯವಾಗಿ ತಿರಸ್ಕರಿಸಿದ್ದಾರೆ.ರಾಜಕೀಯ ಡೊಂಬರಾಟದಲ್ಲಿ ಹಿರಿಯರು ಕಿರಿಯರಿಗೆ ನಮಸ್ಕರಿಸುವುದು ಅಂದರೆ ಏನಪ್ಪಾ ಎನ್ನುವಂತಾಯಿತು ಇಂದಿನ ಈಶ್ವರಪ್ಪನವರ ನಡೆ.ವಯಸ್ಸಿನಲ್ಲಿ ಹಿರಿಯರಾದ ಈಶ್ವರಪ್ಪನವರಿಗೆ 75 ವರ್ಷ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ 61 ವರ್ಷ ಹಿರಿಯರು ಕಿರಿಯರ ಕಾಲಿಗೆ ನಮಸ್ಕರಿಸುವುದು ರಾಜಕೀಯ ಡೊಂಬರಾಟ ಅನ್ನಲೇಬೇಕು ಅಲ್ಲವೇ.ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಜೋಶಿ ಅವರನ್ನ ಹಿಡಿದುಕೊಂಡು ಮಗನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಬೇಕೆಂಬ ಆಲೋಚನೆಯಿಂದ ಅವರನ್ನು ಭೇಟಿಯಾಗಲು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಇದೆಲ್ಲದರ ಮದ್ಯೆ ಕೆಲ ಹೊತ್ತು ಈಶ್ವರಪ್ಪ ಮತ್ತು ಜೋಶಿಯವರು ಚರ್ಚೆ ನಡೆಸಿದರು.ನಂತರ ನಾವುಬ್ಬರೂ ಒಂದೇ ಪಕ್ಷದವರು ಏನಿಲ್ಲಾ ಬಿಡಿ ಎಂದು ಹಾಸ್ಯ ಚಟಾಕಿ ಹಾರಿಸಿದ ಜೋಶಿ ಈಶ್ವರಪ್ಪ ಬಂದ್ರೆ ಸುದ್ದಿ ಸಿಗುತ್ತೇ ನಿಮಗೆ ಎಂದರು.
ಉದಯ ವಾರ್ತೆ ಹುಬ್ಬಳ್ಳಿ