ಹುಬ್ಬಳ್ಳಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯ ಅಂಧಾ ದರ್ಭಾರ.ಇಲಾಖೆಯಲ್ಲಿ ಅವರು ಆಡಿದ್ದೇ ಆಟ.

Share to all

ಹುಬ್ಬಳ್ಳಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯ ಅಂಧಾ ದರ್ಭಾರ.ಇಲಾಖೆಯಲ್ಲಿ ಅವರು ಆಡಿದ್ದೇ ಆಟ.

ಹುಬ್ಬಳ್ಳಿ:-ಹುಬ್ಬಳ್ಳಿಯ ಮಿನಿವಿಧಾನಸೌದಲ್ಲಿರುವ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತಾಲೂಕಾ ಅಧಿಕಾರಿ ಚಂದ್ರಶೇಖರ ಕರವೀರಮಠ ಅವರು ಆಡಿದ್ದೇ ಆಟ ಎನ್ನುವಂತಾಗಿದೆ.ಇಲಾಖೆಯಲ್ಲಿ ಅವರು ಆಡದ ಆಟವಿಲ್ಲಾ.ಮಾಡದ ಕೆಲಸವಿಲ್ಲಾ ಎಂದು ಇಲಾಖೆಯ ಗೋಡೆಗಳೇ ಮಾತಾಡ್ತಿವೆ.

ಅವರು ಈ ಇಲಾಖೆಗೆ ಬಂದು ಎರಡೂವರೆ ವರ್ಷ ಆಗಿರಬಹುದು ಆ ಅವಧಿಯಲ್ಲಿ ಮಾಡಿದ ಕೆಲಸಗಳು ಲೆಕ್ಕಕ್ಕಿಲ್ಲಾ.ಅದರಲ್ಲಿ ಒಂದು ತಾಜಾ ಉದಾಹರಣೆಯನ್ನು ಉದಯ ವಾರ್ತೆ ಬಿಚ್ಚಿಡಲಿದೆ.ಕಳೆದ ಆರು ತಿಂಗಳ ಹಿಂದೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿನಿಯರ ಹಾಸ್ಟೆಲ್ಲೊಂದನ್ನು ಜಯನಗರದಿಂದ ಕಾಟಾನ್ ಮಾರ್ಕೇಟ್ ಶ್ರೀನಾಥ ಕಾಂಪ್ಲೆಕ್ಸನ ನಾಲ್ಕನೇ ಮಹಡಿಗೆ ಸ್ಥಳಾಂತರಿಸಿದ್ದಾರೆ.ಅದರಲ್ಲೇನು ಮಹಾ ಅಂತೀರಾ ಅದರಲ್ಲೇ ಇರುವುದು ಅದಲ ಬದಲ ಕಂಚಿ ಬದಲ.ಕಟ್ಟಡಕ್ಕೆ ಬಾಡಿಗೆ ನಿಗದಿ ಆಗುವ ಮೊದಲೇ ಹಾಸ್ಟೆಲ್ ಅನ್ನು ಸ್ಥಳಾಂತರಿಸಿದ್ದಾರೆ ಅಲ್ಲದೇ ಈ ಹಿಂದೆಯೇ ಆ ಕಟ್ಟಡ ಹಾಸ್ಟೆಲ್ ಗೆ ಯೋಗ್ಯವಿಲ್ಲಾ ಅಂತಾ ನಾಲ್ಕೈದು ಕಾರಣ ನೀಡಿ ಲೋಕೋಪಯೋಗಿ ಇಲಾಖೆ ಅರ್ಜಿಯನ್ನ ರಿಜೆಕ್ಟ್ ಮಾಡಿದಾಗೂ ಹಾಸ್ಟೆಲ್ ಅಲ್ಲೇ ಮುಂದುವರೆದರೆ ಏನರ್ಥ ಸ್ವಾಮಿಗಳೇ.

ಹಾಸ್ಟೆಲ್ ಗೆ ತೆಗೆದುಕೊಂಡಿರುವ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯವರು ನೂರೆಂಟು ಕಾನೂನು ಹೇಳುವವರು ಈಗ ಹೆಂಗೆ ಕಟ್ಟಡಕ್ಕೆ ಬಾಡಿಗೆ ನಿಗದಿ ಮಾಡಿಕೊಡತಾರೆ ಕಾದು ನೋಡ ಬೇಕಾಗಿದೆ.

ಹುಬ್ಬಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇದೊಂದು ಉದಾಹರಣೆ ಅಷ್ಟೇ ಇನ್ನೂ ಸಾಕಷ್ಟು …..ಉದಯ ವಾರ್ತೆ ಬಳಿ ಇವೆ.ಒಂದೊಂದಾಗಿ ಬಯಲಿಗೆಳೆಯಲಿದೆ ಶೀಘ್ರದಲ್ಲಿ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author