ಬಸ್ ಡ್ರೇವರ್ ನ ಹುಚ್ಚು ಪ್ರೀತಿಗೆ ಬಲಿಯಾದ 8ನೇ ತರಗತಿಯ ವಿದ್ಯಾರ್ಥಿನಿ.ಬಸ್ ಡ್ರೈವರ್ ಪ್ರೀತಿ ಟಾರ್ಚರ್ ಗೆ ಬಲಿಯಾದ ಪ್ರೀತಿ.ಪ್ರೀತಿಯೊಂದಿಗೆ ಸಾವಿಗೀಡಾದ ಸಂತೋಷ.

Share to all

ಬಸ್ ಡ್ರೇವರ್ ನ ಹುಚ್ಚು ಪ್ರೀತಿಗೆ ಬಲಿಯಾದ 8ನೇ ತರಗತಿಯ ವಿದ್ಯಾರ್ಥಿನಿ.ಬಸ್ ಡ್ರೈವರ್ ಪ್ರೀತಿ ಟಾರ್ಚರ್ ಗೆ ಬಲಿಯಾದ ಪ್ರೀತಿ.ಪ್ರೀತಿಯೊಂದಿಗೆ ಸಾವಿಗೀಡಾದ ಸಂತೋಷ.

ಚಿಕ್ಕಮಗಳೂರು –

ಬಸ್ ಡ್ರೈವರ್ ರೊಬ್ಬರ ಹುಚ್ಚು ಪ್ರೀತಿಗೆ 8ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಜೀವವನ್ನು ಕಳೆದುಕೊಂಡು ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡು ಸಧ್ಯ ಸಾಕಷ್ಚು ಚರ್ಚೆಗೆ ಗ್ರಾಸವಾಗಿದೆ.ಹುಚ್ಚು ಪ್ರೀತಿಯಿಂದಾಗಿ 8ನೇ ತರಗತಿ ವಿದ್ಯಾರ್ಥಿನಿ ಹಾಗೂ ಬಸ್ ಡ್ರೈವರ್ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಕಳವಳಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಅಜ್ಜಂಪುರ ತಾಲೂಕು ಬಂಕನಕಟ್ಟೆ ಸಮೀಪ ಈ ಒಂದು ಘಟನೆ ನಡೆದಿದೆ.ರೈಲಿಗೆ ಅಡ್ಡಲಾಗಿ ನಿಂತು ಡ್ರೈವರ್ ಸಂತೋಷ್ (38) ಹಾಗೂ 14 ವರ್ಷದ 8ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ಮೃತಪಟ್ಟಿದ್ದಾರೆ. ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಬಸ್ ಡ್ರೈವರ್ ಸಂತೋಷ್ ಪ್ರೀತಿಸುವಂತೆ ಪೀಡಿಸುತ್ತಿದ್ದ ಬಸ್ ಡ್ರೈವರ್ ನೀಡುತ್ತಿದ್ದ ಕಿರುಕುಳದ ಸಂಬಂಧ ವಿದ್ಯಾರ್ಥಿನಿ ಪೋಷಕರು ಶಾಲಾ ಆಡಳಿತ ಮಂಡಳಿ ಗಮನಕ್ಕೆ ಈ ಹಿಂದೆ ತಗೆದುಕೊಂಡು ಬಂದಿದ್ದರು.ವಿದ್ಯಾರ್ಥಿನಿ ಸ್ನೇಹಿತೆಯರ ಜೊತೆ ನ್ಯೂ ಇಯರ್ ಪಾರ್ಟಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಬಂದಿದ್ದಳು ಈ ವೇಳೆ ಸಂತೋಷ್ ಆಕೆಯನ್ನು ಕರೆದೊಯ್ದು ಮಧ್ಯರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಕುರಿತಂತೆ ಪೋಷಕರು ದೂರು ನೀಡಿದರೂ ಕ್ರಮವನ್ನು ಕೈಗೊಳ್ಳದ ಶಾಲಾ ಆಡಳಿತ ಮಂಡಳಿ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉದಯ ವಾರ್ತೆ ಚಿಕ್ಕಮಗಳೂರು.


Share to all

You May Also Like

More From Author