ಟೌನ್ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಅಮಾನತ್ತು ಮಾಡಬೇಕು.ನಾಳೆ ದೊಡ್ಡ ಮಟ್ಟದಲ್ಲಿ ಹೋರಾಟ.ಶಾಸಕ ಅರವಿಂದ ಬೆಲ್ಲದ.
ಹುಬ್ಬಳ್ಳಿ:-ಒಬ್ಬ ಅಟೋ ಓಡಿಸಿ ಜೀವನ ನಡೆಸುವಾತನ ಮೇಲಿನ ಕೇಸ್ ರೀ ಓಪನ್ ಮಾಡಿ ಬಂಧಿಸಿದ್ದಾರೆ.ಕೂಡಲೇ ಟೌನ್ ಠಾಣೆಯ ಇನ್ಸ್ಪೆಕ್ಟರ್ ಮಹ್ಮದರಫೀಕ್ ತಹಶಿಲ್ದಾರ ಅವರನ್ನು ಸಸ್ಪೆಂಡ್ ಮಾಡಬೇಕೆಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಒತ್ತಾಯ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅರವಿಂದ ಬೆಲ್ಲದ.1992ರಲ್ಲಿ ರಾಮ ಮಂದಿರಕ್ಕಾಗಿ ಹೋರಾಟ ನಡೆದಿತ್ತು.ಆ ಸಮಯದಲ್ಲಿ ಕೆಲ ಕೇಸ್ ಆಗಿದ್ದವು.32 ವರ್ಷದ ಹಿಂದಿನ ಕೇಸ್ ಈಗ ರೀ ಓಪನ್ ಮಾಡತಾರೆಂದರೆ ಸಿದ್ದರಾಮಯ್ಯ ಸರಕಾರದ ಸೇಡಿನ ರಾಜಕಾರಣ.ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನ ಟಾರ್ಗೇಟ್ ಮಾಡತಿದ್ದಾರೆ.
ಇದರ ವಿರುದ್ದ ನಾಳೆ ಹುಬ್ಬಳ್ಳಿಯಲ್ಲಿ ಆರ್ ಅಶೋಕ ನೇತ್ರತ್ವದಲ್ಲಿ ಟೌನ್ ಠಾಣೆ ಎದುರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡತೇವಿ.ಅಲ್ಲದೇ ಟೌನ್ ಠಾಣೆಯ ಪಿಆಯ್ ಅವರನ್ನು ಅಮಾನತ್ತು ಮಾಡುವವರೆಗೂ ಹೋರಾಟ ಮಾಡ್ತೇವಿ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ