ಬಿಜೆಪಿಗೆ ಕೈಗೆ ಸಿಕ್ಕಿತು ಚುನಾವಣೆ ಅಸ್ತ್ರ. ಹೆಬ್ಯುಚಲ್ ಅಪೆಂಡರ್ ಶ್ರೀಕಾಂತ ಪೂಜಾರಿ ಬಂಧನವೇ ಬಿಜೆಪಿಗೆ ಶ್ರೀರಕ್ಷೆ.
ಹುಬ್ಬಳ್ಳಿ:-ಬಿಜೆಪಿ ಕೈಗೆ ಸಿಕ್ಕತೂ ಚುನಾವಣೆ ಅಸ್ತ್ರ.ಹೆಬ್ಯುಚಲ್ ಅಪೆಂಡರ್ ಶ್ರೀಕಾಂತ ಪೂಜಾರಿ ಬಂಧನವೇ ಬಿಜೆಪಿಗೆ ಶ್ರೀರಕ್ಷೆಯಂತಾಯಿತು.1992 ರಿಂದ ಇವತ್ತಿನ ಟೌನ್ ಪೋಲೀಸ ಠಾಣೆಯವರೆಗಿನ ಕರಸೇವಕನ ಬಂಧನದ ಪುಲ್ ಡಿಟೇಲ್ ಇಲ್ಲಿದೆ.
ರಾಮಮಂದಿರ ಹೋರಾಟಗಾರನ ಬಂಧನದ ಪ್ರಕರಣ ಈಗ ರಾಜಕೀಯ ತಿರುವುಪಡೆದುಕೊಂಡಿದೆ.
ರಾಮಮಂದಿರ ಹೋರಾಟಗಾರರನ್ನು ಬಂಧಿಸಿದ್ದು ರಾಮ ಮಂದಿರ ಉದ್ಘಾಟನೆ ವೇಳೆ ಹಾಗೂ ಲೋಕಸಭೆ ಚುನಾವಣೆಗೆ ಬಿಜೆಪಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
1992ರ ಪ್ರಕರಣದಲ್ಲಿಯ ಆರೋಪಿಯನ್ನು ಬಂದಿಸಿದ್ದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ.
ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ನಿಂದ ಸೇಡಿನ ರಾಜಕಾರಣ ಎಂದು ಆರೋಪ ಮಾಡಿದೆ ಅಲ್ಲದೇ
ಅಧಿಕಾರದಲ್ಲಿರುವ ಕಾಂಗ್ರೆಸ್ ನಿಂದ ಹಿಂದೂ ವಿರೋಧಿ ನೀತಿ ಅನುಸರಿಸುತ್ತದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಇಂದು ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆಯನ್ನೂ ನಡೆಸಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದೂ ಆಯಿತು.
ವಿರೋದಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
*ಏನಿದು ಪ್ರಕರಣ?*
ದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ VHP BJPಯಿಂದ 1992 ರಲ್ಲಿ ಇಡೀ ದೇಶದಾದ್ಯಂತ ಹಿಂದೂ ಸಂಘಟನೆಗಳ ಪ್ರತಿಭಟನೆ ನಡೆಸಿತ್ತು.ಪ್ರತಿಭಟನೆ ಬೆಂಬಲಿಸಿ ಹುಬ್ಬಳ್ಳಿಯಲ್ಲೂ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿತ್ತು.ಪ್ರತಿಭಟನೆ ವೇಳೆ ನಗರದ ಬಹುತೇಕ ಕಡೆಗಳಲ್ಲಿ ದುಷ್ಕರ್ಮಿಗಳಿಂದ ಭಾರಿ ಹಾನಿಯಾಗಿತ್ತು.
ಸಾರ್ವಜನಿಕ ಖಾಸಗಿ ಆಸ್ತಿಗಳಿಗೆ ದುಷ್ಕರ್ಮಿಗಳು ಕಲ್ಲು ತೂರಿ ಬೆಂಕಿ ಹಚ್ಚಿದ್ದರು.
1992ರ ಡಿ. 6 ರಂದು ಶಹರ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಭಾರಿ ದೊಂಬಿ, ಗಲಾಟೆಗಳು ನಡೆದಿದ್ದವು.ದೊಂಬಿ ವೇಳೆ ವ್ಯಾಪಾರಿ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿ ನಾಶಗೊಳಿಸಲಾಗಿತ್ತು.
ಡಿ.6 ರಾತ್ರಿ 10.30ರ ಸುಮಾರಿಗೆ ಅಡಿಕೆ ಮಾರಾಟ ಮಳಿಗೆಗೆ ಬೆಂಕಿ,ಹಚ್ಚಿದ ಪರಿಣಾಮವಾಗಿ 1.80 ಲಕ್ಷ ಹಾನಿಯಾಗಿತ್ತು.
ಹಜರೇಸಾಬ್ ಅಂಗಡಿ ಎಂಬುವರ ಅಡಿಕೆ ಅಂಗಡಿಗೆ ಬೆಂಕಿ ಹಚ್ಚಲಾಗಿತ್ತು.
ಈ ಕುರಿತು ಮುಲ್ಲಾ ಓಣಿಯ ಹರೇಸಾಬ್ ಅಂಗಡಿ ಠಾಣೆಗೆ ದೂರು ನೀಡಿದ್ದರು.
ಅಂದಿನ ಶಹರ ಠಾಣೆ ಇನ್ಸ್ಪೆಕ್ಟರ್ A D ತೀನಮೇಕರ್ ರಿಂದತನಿಖೆ ನಡೆದು
13 ಜನರ ಮೇಲೆ ಶಹರ ಪೊಲೀಸ್ ರಿಂದ ಚಾರ್ಜಶೀಟ್
13 ಜನರಲ್ಲಿ 5 ಜನ ಸಾಕ್ಷಾಧಾರ ಕೊರತೆಯಿಂದ ನ್ಯಾಯಾಲಯದಿಂದ ಖುಲಾಸೆಯಾಗಿತ್ತು.
ಇನ್ನುಳಿದ 8 ಜನ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು.
ಎರಡನೇ ಅಧಿಕ ದಿವಾಣಿ ನ್ಯಾಯಾಲಯ ಮತ್ತು JMFC -3 ರಿಂದ ವಾರಂಟ್ ಜಾರಿ ಮಾಡಿತ್ತು.31 ವರ್ಷಗಳಿಂದ ಪೊಲೀಸರ ನಿರ್ಲಕ್ಷದಿಂದಾಗಿ ವಾರಂಟ್ ಜಾರಿಯಾಗಿರಲಿಲ್ಲ.
ತಲೆ ಮರೆಸಿಕೊಂಡಿದ್ದ 8 ಜನ ಆರೋಪಿತರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಲಾಂಗ್ ಪೆಂಡಿಂಗ್ ಕೇಸ್ ಕ್ಲಿಯರ್ ಮಾಡಲು ಮುಂದಾದ ಶಹರ ಪೊಲೀಸರು
ಪ್ರತಿ ವರ್ಷದ ಕೊನೆಯ ತಿಂಗಳಲ್ಲಿ ಲಾಂಗ್ ಪೆಂಡಿಂಗ್ ಕೇಸ್ ಕ್ಲಿಯರ್ ಪದ್ದತಿಯಿಂದ
ಲಾಂಗ್ ಪೆಂಡಿಂಗ್ ಕೇಸ್ ಕ್ಲಿಯರ್ ಮಾಡಿದ್ರೆ ಇಲಾಖೆಯಿಂದ ಸಿಗತ್ತೆ ಪ್ರಶಸ್ತಿ ಎಂದು ಕೇಸ್ ಕ್ಲಿಯರ್ ಮಾಡುವಂತೆ ಮೇಲಾಧಿಕಾರಿಗಳಿಂದ ಒತ್ತಡವೂ ಇರುತ್ತದೆ.
ಹೀಗಾಗಿ ಲಾಂಗ್ ಪೆಂಡಿಂಗ್ ಕೇಸ್ ಕ್ಲಿಯರ್ ಮಾಡಲು ಹೋಗಿ ಜೇನುಗೂಡಿಗೆ ಕಲ್ಲು ಹೊಡೆದಂಗಾಗಿದೆ.
ಪೆಂಡಿಂಗ್ ಕೇಸ್ ನಲ್ಲಿ ರಾಮಮಂದಿರ ಹೋರಾಟ ಗಲಭೆ ಪ್ರಕರಣ ಉಳದಿತ್ತು.
ಈ ಹಿನ್ನಲೆಯಲ್ಲಿ ರಾಜು ಧರ್ಮದಾಸ ರನ್ನು 15 ದಿನದ ಹಿಂದೆ ಬಂಧಿಸಲಾಗಿತ್ತು.
ರಾಜು ಧರ್ಮದಾಸ ಅವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು
ಇನ್ನುಳಿದ ಆರೋಪಿಗಳನ್ನು ಬಂಧಿಸಲು ಹೋದಾಗ ಸಿಕ್ಕಿದ್ದು ಶ್ರೀಕಾಂತ ಪೂಜಾರಿ.
*ದೊಂಬಿ ಪ್ರಕರಣದಲ್ಲಿ ಯಾರ್ಯಾರು ಆರೋಪಿಗಳು?*
A1 ವಿನಾಯಕ ಪವಾರ್ (ಖುಲಾಸೆ)
A2 ರಾಜು ಧರ್ಮದಾಸ್
A3 ಶ್ರೀಕಾಂತ ಪೂಜಾರಿ
A4 ಅಶೋಕ ಕಲಬುರ್ಗಿ (ಸಾವು)
A5 ಷಣ್ಮುಕ್ ಕಾಟಿಗಾರ (ಸಾವು)
A6 ಗುರುನಾಥಸಾ ಕಾಟಿಗಾರ್ (ಸಾವು)
A7 ಹನಮಂತಸಾ ಖೋಡೆ (ಖುಲಾಸೆ)
A8 ರಾಮಚಂದ್ರಸಾ ಕಲಬುರ್ಗಿ
A9 ಅಮೃತ ಕಲಬುರ್ಗಿ
A10 ವಿನಾಯಕ ಖೋಡೆ ( ಖುಲಾಸೆ)
A11 ಅಶೋಕ ಬದ್ದಿ
A12 ರಾಜು ಪವಾರ (ಖುಲಾಸೆ)
A13 ಅನಿಲ್ ಪವಾರ್ (ಖುಲಾಸೆ)
*ಬಂಧಿತ ಶ್ರೀಕಾಂತ ಮೇಲಿವೆ 16 ಕೇಸ್ ಗಳು*
1992ರ ಪ್ರಕರಣದಲ್ಲಿ ಬಂದಿತನಾದ ಶ್ರೀಕಾಂತ ಮೇಲಿವೆ 16 ಪ್ರಕರಣಗಳು
1992 ರಿಂದ 2018 ವರೆಗೆ ವಿವಿಧ ಹುಬ್ಬಳ್ಳಿಯ ಠಾಣೆಗಳಲ್ಲಿ ದಾಖಲಾಗಿವೆ
*ಅಕ್ರಮ ಸರಾಯಿ ಮಾರಾಟ ಪ್ರಕರಣಗಳು*
ಶ್ರೀಕಾಂತ ಮೇಲೆ ದಾಖಲಾಗಿವೆ 9 ಅಕ್ರಮ ಸರಾಯಿ ಮಾರಾಟ ಪ್ರಕರಣಗಳು
ಹಳೇ ಹುಬ್ಬಳ್ಳಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು
1998ರಿಂದ 2013ರ ವರೆಗೆ ಅಕ್ರಮ ಸರಾಯಿ ಮಾರಾಟದಲ್ಲಿ ಶ್ರೀಕಾಂತ ಭಾಗಿ?
*ದೊಂಬಿ ಗಲಾಟೆ ಪ್ರಕರಣಗಳು*
ಶ್ರೀಕಾಂತ ಪೂಜಾರಿ ಮೇಲೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿವೆ 3 ದೊಂಬಿ ಪ್ರಕರಣಗಳು
1992 ರಿಂದ 2014 ರ ವರೆಗೆ 3 ದೊಂಬಿ ಪ್ರಕರಣಗಳು ಶ್ರೀಕಾಂತ ಮೇಲೆ ದಾಖಲಾಗಿವೆ
*ಮಟಕಾ ಜೂಜಾಟ ಪ್ರಕರಗಳು*
ಮಟಕಾ ಜೂಜಾಟದ ಪ್ರಕರಣದಲ್ಲಿ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಶ್ರೀಕಾಂತ ಆರೋಪಿ
*ಮುಂಜಾಗೃತ ಕ್ರಮದ ಹಿನ್ನಲೆ ಪ್ರಕರಣಗಳು*
ಮುಂಜಾಗ್ರತ ಕ್ರಮದ 3 ಪ್ರಕರಣಗಳು ಕಸಬಾಪೇಟೆ ಠಾಣೆಯಲ್ಲಿ ಶ್ರೀಕಾಂತ ಮೇಲಿವೆ.
ಉದಯ ವಾರ್ತೆ ಹುಬ್ಬಳ್ಳಿ