ಕಡ್ಡಾಯ ರಜೆ ಮೇಲೆ ಶಹರ ಪೋಲೀಸ ಇನಸ್ಪೆಕ್ಟರ್ .ಬಿಜೆಪಿ ಪ್ರತಿಭಟನೆಗೆ ಮಣಿದರಾ ಹುಬ್ಬಳ್ಳಿ ಪೋಲೀಸರು..
ಹುಬ್ಬಳ್ಳಿ:- ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಗೆ ಹುಬ್ಬಳ್ಳಿ ಪೋಲೀಸರು ಮಣಿದಿದ್ದಾರೆ ಎನ್ನಲಾಗಿದೆ.ಶಹರ ಪೋಲೀಸ ಠಾಣೆಯ ಇನ್ಸಪೆಕ್ಟರ್ ಮಹ್ಮದ ರಫೀಕ ತಹಶಿಲ್ದಾರ ಅವರನ್ನು ಕಡ್ಡಾಯ ರಜೆಗೆ ಕಳಿಸಿದ್ದಾರೆ.
ಪರಸ್ಥಿತಿ ನಿಭಾಯಿಸಲು ಕಡ್ಡಾಯ ರಜೆ ಮೇಲೆ ಕಳಿಸಲಾಯ್ತಾ.ಕರಸೇವಕನ ಬಂಧನ ಪ್ರಕರಣ ಉಲ್ಬಣಗೊಳ್ಳುತ್ತಲೇ ಕಡ್ಡಾಯ ರಜೆ ಮೇಲೆ ಕಳಿಸಿದರಾ ಅನ್ನೋ ಪ್ರಶ್ನೆ ಎದ್ದಿದೆ.
ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸ ಆಯುಕ್ತರಿಂದ ಕಡ್ಡಾಯ ರಜೆ ಹೋಗಲು ಸೂಚಿಸಿದ್ದಾರಂತೆ.ಅವರ ಸ್ಥಳಕ್ಕೆ ಇನ್ಸ್ಪೆಕ್ಟರ್ ಬಿ ಎ ಜಾಧವ ಅವರನ್ನು ನೇಮಿಸಿದ್ದಾರೆ.
ಇನ್ಸಪೆಕ್ಟರ್ ಅಮಾನತ್ತಿಗೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು.ಬಿಜೆಪಿ ಪ್ರತಿಭಟನೆಗೆ ಪೋಲೀಸರು ಮಣಿದರಾ ?
ಉದಯ ವಾರ್ತೆ ಹುಬ್ಬಳ್ಳಿ