ಶ್ರೀಕಾಂತ ಪೂಜಾರಿ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದರೆ, ಜೋಶಿ ಬದಲು ಶ್ರೀಕಾಂತಗೆ ಟಿಕೆಟ್ ಕೊಡಿ.ಅಭಿಯಾನ ಆರಂಭ ಮಾಡಿದ ಕಾಂಗ್ರೆಸ್.
ಹುಬ್ಬಳ್ಳಿ:-ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣವನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದೆ.
ಹೊಸ ಅಭಿಯಾನ ಶುರು ಮಾಡಿದ ಕಾಂಗ್ರೆಸ್,
ಪ್ರಲ್ಹಾದ್ ಜೋಶಿ ಬದಲಿಗೆ ಶ್ರೀಕಾಂತ್ ಪೂಜಾರಿಗೆ ಟಿಕೆಟ್ ಕೊಡಿ ಎಂದು ಅಭಿಯಾನ ಆರಂಭಿಸಿದೆ.ಧಾರವಾಡ ಲೋಕಸಭೆ ಟಿಕೆಟ್ ಶ್ರೀಕಾಂತ್ ಪೂಜಾರಿಗೆ ನೀಡಲಿ ಎಂದು ಅಭಿಯಾನ.
ಕಳ್ಳಬಟ್ಟಿ,ಮಟ್ಕಾ ದಂಧೆಕೋರ 16 ಪ್ರಕರಣಗಳಲ್ಲಿ ಭಾಗಿಯಾಗೋ ಮೂಲಕ ಬಿಜೆಪಿ ಅಭ್ಯರ್ಥಿ ಯಾಗೋ ಅರ್ಹತೆ ಪಡೆದಿದ್ದಾನೆ.
ಇತನ ಬಗ್ಗೆ ಬಿಜೆಪಿಗೆ ಕಾಳಜಿ ಇದ್ರೆ ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ.
ಹೊಸ ಪ್ರತಿಭೆಯನ್ನು ಪರಿಚಯ ಮಾಡಲಿ ಎಂದು ಅಭಿಯಾನ ಆರಂಭಿಸಿದೆ.
ಉದಯ ವಾರ್ತೆ ಹುಬ್ಬಳ್ಳಿ