ಮಧ್ಯಾಹ್ನ ಮೂರು ಗಂಟೆಗೆ ಹೊರಬರಲಿದೆ ಶ್ರೀಕಾಂತ ಭವಿಷ್ಯ.
ಮೂರು ಗಂಟೆಯವರೆಗೆ ತೀರ್ಪು ಕಾಯ್ದಿರಿಸಿದ ಹುಬ್ಬಳ್ಳಿಯ ಒಂದನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ.
ಹುಬ್ಬಳ್ಳಿ:-ಬಂಧಿತ ಶ್ರೀಕಾಂತ ಪೂಜಾರಿ ಅವರ ಭವಿಷ್ಯ ಮದ್ಯಾಹ್ನ ಮೂರು ಘಂಟೆಗೆ ಹೊರಬೀಳಲಿದೆ.ಮೂರು ಗಂಟೆಗೆ ತೀರ್ಪು ಹೊರಬಂದ್ರು ಶ್ರೀಕಾಂತಗಿಲ್ಲ ಇಂದು ಬಿಡುಗಡೆ ಭಾಗ್ಯ.
1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಬಂದ ನಂತ್ರ ದಾಖಲೆಗಳನ್ನು 5 ಮತ್ತು 3 ನೇ ಜೆಎಮ್ಎಫ್‌ಸಿ ನ್ಯಾಯಾಲಕ್ಕೆ ಕೊಡಬೇಕು.
ತೀರ್ಪು ಆದೇಶವನ್ನ ಈ ಎರಡೂ ಕೋರ್ಟ್‌ಗಳಿಗೆ ತಲುಪಿಸಬೇಕು.ನಂತ್ರ ಸಾಯಂಕಾಲ 6 ಗಂಟೆಯವರೆಗೆ ತೀರ್ಪಿನ ಆದೇಶವನ್ನ ಜೈಲು ಅಧಿಕಾರಿಗಳ ಕೈ ಸೇರಬೇಕು.
ಒಂದು ವೇಳೆ ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದ್ರೆ ಶ್ರೀಕಾಂತನಿಗಿಲ್ಲ ಇಂದು ಬಿಡುಗಡೆ ಭಾಗ್ಯ.
ಹೀಗಾಗಿ ನಾಳೆ ಸಿಗಲಿದೆ ಶ್ರೀಕಾಂತಗೆ ಜೈಲಿನಿಂದ ಮುಕ್ತಿ.
ಉದಯ ವಾರ್ತೆ ಹುಬ್ಬಳ್ಳಿ.