ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು.

Share to all

ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು.

ಹುಬ್ಬಳ್ಳಿ: ಶ್ರೀರಾಮ ಜನ್ಮ ಭೂಮಿ ಗಲಭೆ ಸಂಬಂಧ ನ್ಯಾಂಯಾಂಗ ಬಂಧನದಲ್ಲಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣದ ವಿಚಾರವಾಗಿ 1992ರ ಗಲಭೆ ಪ್ರಕರಣದಲ್ಲಿ ಎ೩ ಆರೋಪಿ ಶ್ರೀಕಾಂತ ಪೂಜಾರಿ ಅವರು ಡಿ.29ರಂದು ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಶ್ರೀಕಾಂತ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಘನ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿ ತೀರ್ಪು ಪ್ರಕಟಿಸಿದೆ.

ಆರೋಪಿಯ ಪರ ವಕೀಲರಾದ ಸಂಜಯ ಬಡಸ್ಕರ್, ಅಶೋಕ ಅನ್ವೇಕರ ವಾದ ಮಂಡಿಸಿದ್ದರು. ಸರ್ಕಾರದ ಪರವಾಗಿ ಅಮರಾವತಿ ಬಿ.ಎನ್. ವಾದ ಮಂಡಿಸಿದ್ದರು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author