ಮಾಜಿ ಸಿಎಂ ಬೊಮ್ಮಾಯಿ ಕೋಟೆಗೆ ಲಗ್ಗೆ ಇಟ್ಟ ರಜತ್ ಉಳ್ಳಾಗಡ್ಡಿಮಠ. ಕಾರ್ಯಕರ್ತರಿಂದ ಬಹುಪರಾಕ್.

Share to all

ಮಾಜಿ ಸಿಎಂ ಬೊಮ್ಮಾಯಿ ಕೋಟೆಗೆ ಲಗ್ಗೆ ಇಟ್ಟ !!!ರಜತ್ ಉಳ್ಳಾಗಡ್ಡಿಮಠ.!!!
ಕಾರ್ಯಕರ್ತರಿಂದ ಬಹುಪರಾಕ್.

ಧಾರವಾಡ: ಧಾರವಾಡ ಲೋಕಸಭಾ ಚುನಾವಣಾ ಕಾವು ಕಾಂಗ್ರೆಸ್ ನಲ್ಲಿ ಈಗಾಗಲೇ ಜೋರಾಗಿ ಎದ್ದು ಕಾಣುತ್ತಿದೆ, ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರನ್ನು ಲೋಕಸಭೆಗೆ ತಯಾರಾಗುವಂತೆ ಹುರಿದುಂಬಿಸುತ್ತಿದ್ದಾರೆ,ಜೊತೆ ಜೊತೆಗೆ ಇದೀಗ ಪರೋಕ್ಷವಾಗಿ ಚುನಾವಣಾ ಪ್ರಚಾರ ಆರಂಭಿಸಿದಂತೆ ಕೂಡ ಭಾಸವಾಗುತ್ತಿದೆ.

ಬಿಜೆಪಿಯ ಮಾಜಿ ಸಿಎಂಬಸವರಾಜ್ ಬೊಮ್ಮಾಯಿ ಅವರ ಭದ್ರಕೋಟೆ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಯಾಸಿರ್ ಖಾನ್ ಪಠಾಣ್ ರೊಂದಿಗೆ ಕಾರ್ಯಕರ್ತರನ್ನು ಭೇಟಿ ಮಾಡಿ ಬರುವ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ,ಅಲ್ಲದೆ ಬಿಜೆಪಿ ಶಾಸಕ ಎಂ ಆರ್ ಪಾಟೀಲ್ ಪ್ರತಿನಿಧಿಸುವ ಕುಂದಗೋಳ ಮತಕ್ಷೇತ್ರದ ಸಂಶಿ ಹಾಗೂ ಬೆಳಗಲಿ ಗ್ರಾಮಗಳಲ್ಲಿ ಕೂಡ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆಗೆ ಈಗಾಗಲೇ ಪಕ್ಷದ ಹೈಕಮಾಂಡ್ ನಿಂದ ಸೂಚನೆ ಪಡೆದಂತೆ ಇರುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಪ್ರಮುಖವಾಗಿ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ, ಇದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಕಾಣಿಸುತ್ತಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author