ಹುಬ್ಬಳ್ಳಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ.ಸ್ಥಳದಲ್ಲಿ ನಾಲ್ವರ ದುರ್ಮರಣ.

Share to all

ಹುಬ್ಬಳ್ಳಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ.ಸ್ಥಳದಲ್ಲಿ ನಾಲ್ವರ ದುರ್ಮರಣ.

ಹುಬ್ಬಳ್ಳಿ -ಎರಡು ಕಾರು ಮತ್ತು ಒಂದು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಘಟನ ಹುಬ್ಬಳ್ಳಿ ಹೊರವಲಯದ ಪೂನಾ ಬೆಂಗ ಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ ಹೌದು ಎರಡು ಕಾರುಗಳ ಮತ್ತು ಲಾರಿ ನಡುವೆ ಈ ಒಂದು ಸರಣಿ ಅಪಘಾತ ಸಂಭವಿಸಿದೆ.

ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ.ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಬಳಿ ಈ ಒಂದು ಅಪಘಾತ ದ ಘಟನೆ ನಡೆದಿದೆ. ಬೆಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅಪಘಾತ ನಡೆದಿದೆ.

ಸ್ಥಳಕ್ಕೆ ಎಸ್ಪಿ ಗೋಪಾಲ ಬ್ಯಾಕೋಡ ಸೇರಿದಂತೆ ಕುಂದಗೋಳ ಪೊಲೀಸರ ಭೇಟಿ ನೀಡಿ ಪರಿಶೀ ಲನೆ ನಡೆಸಿದರು. ಹಾಸನದ ‌ಮೂಲದ ಮೂವರು ಬೆಂಗಳೂರಿನ ಓರ್ವ ವ್ಯಕ್ತಿಯು ಈ ಒಂದು ಅಪಘಾತ ದಲ್ಲಿ ಮೃತಪಟ್ಟಿದ್ದಾರೆ.

ಮಣಿಕಂಠ (26), ಪವನ(23), ಚಂದನ (31) ಹಾಗೂ ಬೆಂಗಳೂರಿನ ಪ್ರಭು(34) ಮೃತಪಟ್ಟ ವರಾಗಿದ್ದಾರೆ.ಹಾಸನದಿಂದ ಗೋವಾಗೆ ತೆರಳು ತ್ತಿದ್ದ ಒಂದು ಕಾರಿನಲ್ಲಿ ಗೆಳೆಯರು. ಬೆಂಗಳೂರಿ ನಿಂದ ಶಿರಡಿಗೆ ತೆರಳುತಿದ್ದ ಮತ್ತೊಂದು ಕಾರಿನಲ್ಲಿ ಪ್ರಭು (34) ಮತ್ತು ಗೆಳೆಯರು ಈ ಕಾರಿನಲ್ಲಿ ಫ್ರಭು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸ್ಥಳಕ್ಕೆ ಧಾರವಾಡ ಎಸ್ಪಿ ಡಾ ಗೋಪಾಲ ಬ್ಯಾಕೋಡ್ ಸೇರಿದಂತೆ ಹಿರಿಯ ಪೊಲೀಸ್ ಟೀಮ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author