ಶ್ರೀಕಾಂತ ಪೂಜಾರಿ ಬಿಡುಗಡೆ ಆಯಿತು.ಬಿಜೆಪಿ ಮುಖಂಡರ ಮೇಲೆ ದಾಖಲಾಯ್ತು FIR.ಶ್ರೀಕಾಂತ ಆದ ಒಬ್ಬಂಟಿಗ.
ಹುಬ್ಬಳ್ಳಿ:-ಒಂಬತ್ತು ದಿನಗಳ ಶ್ರೀಕಾಂತ ಪೂಜಾರಿ ಬಂಧನದ ಹೈ ಡ್ರಾಮಾಕ್ಕೆ ಸಿಕ್ಕಿತು ಮುಕ್ತಿ. ಶ್ರೀಕಾಂತ ಪೂಜಾರಿಯ ಬಂಧನ ಮುಂದಿಟ್ಟುಕೊಂಡ ಹೋರಾಟ ಮಾಡಿದ ಬಿಜೆಪಿ ನಾಯಕರ ಮೇಲೆ ಬಿತ್ತು FIR.
ಹೌದು ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಹೋರಾಟಕ್ಕಿಳಿದ ಬಿಜೆಪಿ ಮುಖಂಡ ಆರ್ ಅಶೋಕ ಶಾಸಕರಾದ ಮಹೇಶ ಟೆಂಗಿನಕಾಯಿ. ಎಂ ಆರ್ ಪಾಟೀಲ ಸೇರಿದಂತೆ 43 ಮುಖಂಡರ ಮೇಲೆ ಹುಬ್ಬಳ್ಳಿಯ ನಗರ ಪೋಲೀಸ ಠಾಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಲ್ತಾಪ ಹಳ್ಳೂರ ದೂರು ನೀಡಿದ್ದರು.ಆ ದೂರಿನ ಅನ್ವಯ ನ್ಯಾಯಾಲಯದ ಅನುಮತಿ ಪಡೆದು FIR ದಾಖಲು ಮಾಡಿದ್ದಾರೆ. ಇವರೆಲ್ಲರ ಮೇಲೆ IPC section u/s 290,504 ಅಡಿಯಲ್ಲಿ ದೂರು ದಾಖಲಾಗಿದೆ.
ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಹುಬ್ಬಳ್ಳಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದ ಬಿಜೆಪಿ ಅದೇ ಶ್ರೀಕಾಂತ ಜಾಮೀನು ಮಂಜೂರಾದ ದಿನ ಯಾರೊಬ್ಬ ಬಿಜೆಪಿ ನಾಯಕರು ನ್ಯಾಯಾಲಯದ ಆವರಣದಲ್ಲಿ ಕಾಣಿಸಲಿಲ್ಲಾ.ಅಲ್ಲದೇ ನಿನ್ನ ಉಪಕಾರಾಗ್ರಹದಿಂದ ಬಿಡುಗಡೆ ಆದಾಗೂ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಬೆರಳೆಣಿಕೆಯಷ್ಟು ಬಿಜೆಪಿ ನಾಯಕರು ಮಾತ್ರ ಇದ್ದರು.
ಶ್ರೀಕಾಂತ ಪೂಜಾರಿ ಬಂಧನವನ್ನು ಕರಸೇವಕ,ರಾಮ ಭಕ್ತ ಎಂದು ಬಿಂಬಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕೆಂದುಕೊಂಡಿದ್ದ ಬಿಜೆಪಿಗೆ ಯಾವಾಗ ಶ್ರೀಕಾಂತ ಪೂಜಾರಿ ಒಬ್ಬ ಹೆಬ್ಯುಚಲ್ ಅಪೆಂಡರ್ ಅಂತಾ ಗೊತ್ತಾಗತಿದ್ದಂತೆ ದೂರ ಸರಿದಂತೆ ಕಾಣತಾ ಇದೆ.
ಕಳೆದ ನಾಲ್ಕು ದಿನಗಳ ಹಿಂದೆ ಅಬ್ಬರಿಸಿ,ಬೊಬ್ಬರಿಸಿ ಹೋದ ಆರ್ ಅಶೋಕ ನಗರ ಠಾಣೆಯ ಇನಸ್ಪೆಕ್ಟರ್ ಅವರನ್ನ ಅಮಾನತ್ತು ಮಾಡದೇ ಹೋದರೆ 9 ನೇ ತಾರೀಖು ಮತ್ತೆ ಹುಬ್ಬಳ್ಳಿಗೆ ಬರುತ್ತೇವೆ ಹೋರಾಟ ಮಾಡ್ತೇವಿ ಅಂದವರು ಎಲ್ಲಿ ಅನ್ನೋ ಪ್ರಶ್ನೆ ಈಗ ಅದೇ ಬಿಜೆಪಿಯಲ್ಲಿ ಕೇಳಿಬರ್ತಿದೆ.
ಉದಯ ವಾರ್ತೆ ಹುಬ್ಬಳ್ಳಿ