ಯಶ್ ಅಭಿಮಾನಿಗಳ ಸಾವು ಪ್ರಕರಣ.ಮ್ರತರ ಮನೆಗೆ ಭೇಟಿ ನೀಡಿದ ರಾಕಿಂಗ್ ಸ್ಟಾರ್. ಕುಟುಂಬಸ್ಥರಿಗೆ ಸಾಂತ್ವನ..
ಗದಗ:-ರಾಕಿಂಗ್ ಸ್ಟಾರ್ ಯಶ್ ಮೇಲಿನ ಅಭಿಮಾನದಿಂದ ಕೌಟೌಟ್ ಕಟ್ಟುವಾಗ ಸಾವನ್ನಪ್ಪಿದ ಮನೆಗೆ ಭೇಟಿ ನೀಡಿದ ಸುಲ್ತಾನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.
ದು:ಖದಲ್ಲಿಯೇ ಯಶ್ ಜೊತೆಗೆ ಮಾತನಾಡಿದ ಮ್ರತರ ತಂದೆ ತಾಯಿ ಮಕ್ಕಳಿಂದಲೇ ಮನೆ ನಡೆಯುತ್ತಿತ್ತು ಈಗ ಏನೂ ತೋಚದಾಗಿದೆ ಎಂದು ಅಳಲು ತೋಡಿಕೊಂಡರು.
ಮೃತ ಮೂವರು ಅಭಿಮಾನಿಗಳ ಮನೆಗೆ ಭೇಟಿ ಮಾಡಿದ ಬಳಿಕ ಮಾತನಾಡಿದ ಯಶ್ ಯಾರು ಇದನ್ನು ಇಷ್ಟ ಪಡೊಲ್ಲಾ.ಈ ರೀತಿ ಆಗುತ್ತದೆ ಎಂದು ನಾನು ಸರಳವಾಗಿ ಬರ್ತಡೆ ಆಚರಿಸಲು ತಿರ್ಮಾನ ಮಾಡಿದ್ದೇ.ಈಗ ಅದನ್ನೆಲ್ಲಾ ಮಾತನಾಡುವ ಸಮಯವಲ್ಲ-ಯಶ್.
ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇವೆ.ಏನೇ ಪರಿಹಾರ ಕೊಟ್ಟರು ಮಗ ವಾಪಸ್ ಬರ್ತಾನಾ?
ನಾನು ಇಲ್ಲಿ ಬಂದಿರುವುದು ಅವರ ತಂದೆ-ತಾಯಿಗಾಗಿ,ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇನೆ.ಅಭಿಮಾನ ತೋರಿಸುವುದಾದ್ರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ,ನಮ್ಮ ಬಗ್ಗೆ ಯೋಚನೆ ಮಾಡಬೇಡಿ.
ನೀವು ಖುಷಿಯಾಗಿರಿ
ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಇದೆಲ್ಲಾ ಬಿಟ್ಟುಬಿಡಿ.ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರು ಇಷ್ಟ ಪಡಲ್ಲ.ನನಗಂತು ಈ ಥರ ಅಭಿಮಾನ ಬೇಡವೇ ಬೇಡಾ
ಬೈಕ್ನಲ್ಲಿ ಚೇಸ್ ಮಾಡಿಕೊಂಡು ಬರುವುದು ಎಲ್ಲಾ ಬೇಡ.ಈಗ ನಾನು ಬರುವಾಗಲೂ ಬೈಕ್ನಲ್ಲಿ ಚೇಸ್ ಮಾಡ್ತಿದ್ರು.ಕಟೌಟ್ ಕಟ್ಟಬೇಡಿ ಅಂದ್ರೆ ಬೇಜಾರು ಮಾಡಿಕೊಳ್ತೀರಿ.ನಾನು ಬರ್ತಡೆ ಆಚರಿಸದೆ ಇರೋದಕ್ಕೆ ಮಾಧ್ಯಮಗಳಲ್ಲಿಯ ವರದಿಗಳು.ಮತ್ತೆ ಕರೊನಾ ಬಂದಿದೆ ಎಂದು ನೀವೆ ವರದಿ ಮಾಡಿದ್ದಿರಿ.ಹೀಗಾಗಿ ಮತ್ತೆ ಏನೊ ಸಮಸ್ಯೆ ಆಗುವುದು ಬೇಡಾ ಎಂದು ಬರ್ತಡೆ ಮಾಡಿಕೊಂಡಿಲ್ಲಾ.
ನಾನು ಹೆಂಡತಿ ಮಕ್ಕಳ ಜೊತೆ ಗೋವಾದಲ್ಲಿ ಇದ್ದೆ ಈ ಸುದ್ದಿ ಕೇಳಿದಾಗ ಬಹಳ ಬೇಜಾರ್ ಆಗಿದೆ.ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ನಟ ಯಶ್ ಹೇಳಿಕೆ.ನನಗೆ ಬರ್ತ್ಡೇ ಅಂದ್ರೇನೇ ಭಯ ಬಂದು ಬಿಟ್ಟಿದೆ.ಕಳೆದ ವರ್ಷ ಮನೆ ಬಳಿ ಬೆಂಕಿ ಹಂಚಿಕೊಂಡಿದ್ದರು.
ನನ್ನ ಬರ್ತ್ಡೇ ಅಂದ್ರೆ ನನಗೆ ಅಸಹ್ಯವಾಗಿಬಿಟ್ಟಿದೆ ಎಂದು ಯಶ್ ಹೇಳಿದ್ದಾರೆ.
ಉದಯ ವಾರ್ತೆ ಗದಗ