ಗದಗದಿಂದ ನಟ ಯಶ್ ವಾಪಸ್ ಆಗುವಾಗ ಮತ್ತೊಂದು ಅವಘಡ.
ನಟ ಯಶ್ ಹಿಂದಿದ್ದ ಪೊಲೀಸ್ ವಾಹನ ಹಾಗೂ ಸ್ಕೂಟಿ ನಡುವೆ ಡಿಕ್ಕಿ.
ಗದಗ:- ಅಭಿಮಾನಿಗಳ ಮ್ರತರ ಕುಟುಂಬಕ್ಕೆ ಸಾಂತ್ವನ ಹೇಳಿ ವಾಪಸ್ಸು ಹೋಗುವಾಗ ಪೋಲೀಸ ಜೀಪಿಗೆ ಸ್ಕೂಟಿ ಡಿಕ್ಕಿಯಾಗಿ ಯಶ್ ಅಭಿಮಾನಿ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಗದಗ ತೇಜಾ ನಗರದ ಬಳಿ ಘಟನೆ ನಡೆದಿದ್ದು.ಗಾಯಾಳನ್ನು ಜಿಮ್ಸ್ ಆಸ್ಪತ್ರೆಗೆ ಪೊಲೀಸರು ತಮ್ಮ ಜೀಪಿನಲ್ಲಿಯೇ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
ಯಶ್ ಬೆಂಗಾವಲು ವಾಹನವಾಗಿ ಹೊರಟಿದ್ದ ಪೊಲೀಸ್ ಜೀಪ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ.ಸ್ಕೂಟಿ ಮೇಲೆ ಯಶ್ ನೋಡಲು ಬಂದಿದ್ದ ಯುವಕ ಈಗ ಆಸ್ಪತ್ರೆಗೆ ಸೇರಿಕೊಂಡಿದ್ದಾನೆ.ಪೊಲೀಸ್ ಬೊಲೇರೊ ಹೊಡೆತಕ್ಕೆ ಸ್ಕೂಟಿ ಪೇರ್ ಪಾರ್ಟ್ಸ್ ಪುಡಿಪುಡಿಯಾಗಿ ಸಾವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಉದಯ ವಾರ್ತೆ ಗದಗ