ಬೆಳ್ಳಂ ಬೆಳಗ್ಗೆ ಮಿನಿಸ್ಟರ್ ಗಳಿಗೆ ವಾರ್ನಿಂಗ್ ಕಾಲ್,ಲೋಕಸಭೆ ಸೋತರೆ ಹೋಗಲಿದೆ ಸಚಿವಗಿರಿ.
ಬೆಂಗಳೂರು : ಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಗೆ ಅಧಿಕ ಸ್ಥಾನ ಗೆಲ್ಲುವ ತಂತ್ರಗಾರಿಕೆ ಯಲ್ಲಿರುವ ಉಸ್ತುವಾರಿ ಸರ್ಜೇವಾಲ ಇಂದು ಖಡಕ್ ವಾರ್ನಿಂಗ್ ಮೆಸೇಜ್ ಒಂದನ್ನು ಫೋನಿನ ಮೂಲಕ ನೀಡಿದ್ದು ಕೆಪಿಸಿಸಿ ವಲಯದಲ್ಲಿ ಸಂಚಲನ ಮೂಡಿಸಿದೆ
28 ಕ್ಯಾಬಿನೆಟ್ ಮಿನಿಸ್ಟರ್ ಗಳು ಉಸ್ತುವಾರಿ ವಹಿಸಿಕೊಂಡಿರುವ ಲೋಕಸಭಾ ಕ್ಷೇತ್ರಗಳಿಗಎಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಶತಾಯ ಗತಾಯ ಗೆಲ್ಲಿಸಿಕೊಂಡ ಬರಲೇಬೇಕು ಇಲ್ಲವಾದಲ್ಲಿ ತಾವೇ ಜವಾಬ್ದಾರರು ಎಂದು ಎಚ್ಚರಿಕೆ ಸಂದೇಶವನ್ನು ಇದೀಗ ತಲುಪಿದಸಲಾಗಿದೆ,ಇದರ ಅರ್ಥವನ್ನು ಬಿನ್ನವಾಗಿ ಅರ್ಥೈಸಲಾಗಿದ್ದು ಲೋಕಸಭಾ ಸೋತ ಕ್ಷೇತ್ರದ ಉಸ್ತುವಾರಿ ಮಂತ್ರಿಯ ತಲೆದಂಡ ಕೂಡ ಆಗುವ ಸಾದ್ಯತೆ ಇದೆ.ತಮ್ಮ ಉಸ್ತುವಾರಿ ಕ್ಷೇತ್ರವನ್ನು ಗೆಲ್ಲಿಸಬೇಕು ಇಲ್ಲವಾದಲ್ಲಿ ತಮ್ಮ ಅಧಿಕಾರದಿಂದ ಇಳಿಯಬೇಕು ಎನ್ನುವದು ಹೈ ಕಮಾಂಡ್ ಸ್ಪಷ್ಟ ಸಂದೇಶವನ್ನು ನೀಡಿದ್ದು,
ಇದೀಗ ಜಾಲಿ ಮೂಡ್ ನಲ್ಲಿ ಇದ್ದ ಮಿನಿಸ್ಟರ್ ಗಳು ಲೋಕಸಭೆಗೆ ಇನ್ನಿಲ್ಲದ ಕಸರತ್ತು ನಡೆಸಲು ಇನ್ನೇನು ಸನ್ನದ್ಧ ರಾಗಲಿದ್ದಾರೆ.
ಉದಯ ವಾರ್ತೆ ಬೆಂಗಳೂರು.