ಮತ್ತೊಬ್ಬ ರಾಕಿಂಗ್ ಸ್ಟಾರ್ ಅಭಿಮಾನಿ ಸಾವು.ಸೇನೆ ಸೇರಬೆಂಕೆಂದ ಯುವಕ ಇಹಲೋಕ ಸೇರಿದ.
ಗದಗ:- ನಿನ್ನೆ ರಾಕಿಂಗ್ ಸ್ಟಾರ್ ಯಶ್ ಅವರ ಪೋಲೀಸ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಸ್ಕೂಟಿ ಸವಾರ ಇಂದು ಸಾವನ್ನಪ್ಪಿದ್ದಾನೆ.ನಿನ್ನೆ ಯಶ್ ಅಭಿಮಾನಿಗಳು ಕಟೌಟ್ ಕಟ್ಟಲು ಹೋಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಿ ವಾಪಸ್ಸು ಬರುವಾಗ ಯಶ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಸವಾರ ಡಿಕ್ಕಿ ಹೊಡೆದ ಸಾವು ಬದಿಕಿನ ನಡುವೆ ಆಸ್ಪತ್ರೆಗೆ ದಾಖಲಾಗಿದ್ದರು.ಇಂದು ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾನೆ.
ಬಿಂಕದಕಟ್ಟಿ ಗ್ರಾಮದ ನಿಖಿಲ್ ಕರೂರ್ (22) ಸಾವನ್ನಪ್ಪಿದ್ದು ಲಕ್ಷ್ಮೇಶ್ವರದ ಅಗಡಿ ಎಂಜನೀಯರಿಂಗ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ.ಐದು ಸೆಮಿಸ್ಟರಗಳಲ್ಲೂ ಟಾಪರ್ ಆಗಿದ್ದ ನಿಖಿಲ್ ಎಂಜನೀಯರಿಂಗ್ ಮುಗಿದ ಮೇಲೆ ಯೋಧನಾಗಬೇಕೆಂದು ಕನಸು ಕಂಡಿದ್ದ.ಈ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಆದರೆ ಮೈ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದರಿಂದ ರಿಜೆಕ್ಟ್ ಆಗಿದ್ದ.
ಉದಯ ವಾರ್ತೆ ಗದಗ