!!!ಹೆತ್ತ ಮಗುವನ್ನೇ ಕೊಂದ ಹೆತ್ತಮ್ಮ.ಮಗುವನ್ನು ಕೊಂದು ಸೂಟ್ ಕೇಸನಲ್ಲಿ ತುಂಬಿಕೊಂಡು ಹೋದ ಪಾಪಿ ತಾಯಿ.!!!!
ಚಿತ್ರದುರ್ಗ: ತಾಯಿಯ ಸ್ಥಾನವನ್ನ ಯಾರಿಗೂ ತುಂಬಲು ಸಾದ್ಯವಿಲ್ಲಾ.ತಾಯಿ ಅಂದ್ರೆ ಕಣ್ಣಿಗೆ ಕಾಣುವ ದೇವತೆ.ಕರುಣಾಮಯಿ.ಒಂಬತ್ತು ತಿಂಗಳು ಹೊತ್ತು ಮಗುವಿಗೆ ಜನ್ಮ ಕೊಟ್ಟು ಅಕ್ಕರೆಯಿಂದ ಬೆಳೆಸಿ ಇಡೀ ಜಗತ್ತನ್ನ ಪರಿಚಯ ಮಾಡಿಸುವವಳೇ ಅಮ್ಮ.
ಇಂತಹ ಅಮ್ಮ ಎಂಬ ಶಬ್ದಕ್ಕೆ ನಿಜಕ್ಕೂ ಅರ್ಥಹೀನಳಾಗಿದ್ದಾಳೆ ಇಲ್ಲೊಬ್ಬ ಕ್ರೂರಿ. ತನ್ನದೇ ಕರುಳಬಳ್ಳಿಯನ್ನ ಕೈಯಾರೇ ಕೊಂದು ಹಾಕ್ಬಿಟ್ಟಿದ್ದಾಳೆ ನಿಷ್ಕರುಣಿ ತಾಯಿ.
ಈಕೆ ರಾಕ್ಷಸಿ ತಾಯಿ ಸುಚನಾ ಸೇಠ್. ಮುದ್ದು ಮುದ್ದಾಗಿರೋ ನಾಲ್ಕು ವರ್ಷದ ಕಂದಮ್ಮನ ಉಸಿರು ನಿಲ್ಲಿಸಿಬಿಟ್ಟಿದ್ದಾಳೆ. ಗೋವಾದ ಕ್ಯಾಂಡೊಲಿಮ್ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಮಗುವನ್ನ ಕೊಂದು ಬ್ಯಾಗ್ನಲ್ಲಿ ತುಂಬಿಕೊಂಡು ಬೆಂಗಳೂರಿನತ್ತ ಹೊರಟಿದ್ದ ಈಕೆಯನ್ನ ಚಿತ್ರದುರ್ಗದ ಐಮಂಗಲ ಪೊಲೀಸರು ಬಂಧಿಸಿದ್ದಾರೆ.
ಉದಯ ವಾರ್ತೆ ಚಿತ್ರದುರ್ಗ