!!!ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷರ ಹೆಸರು ಬಹುತೇಕ ಅಂತಿಮ.ಆ ನಾಯಕ ಯಾರು ಗೊತ್ತಾ.?
ಹುಬ್ಬಳ್ಳಿ : ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಓರ್ವ ನಾಯಕನ ಹೆಸರು ಅಂತಿಮವಾಗಿದ್ದು ಅಧಿಕೃತ ಮುದ್ರೆ ಒತ್ತುವುದು ಬಾಕಿ ಇದೆ.ಅಂದುಕೊಂಡಂತೆ ಪ್ರಲ್ಹಾದ ಜೋಶಿ ನಿರ್ಣಯವೇ ಜಿಲ್ಲೆಯಲ್ಲಿ ಫೈನಲ್ ಆಗಿದ್ದು ನಗರ ಹಾಗೂ ಜಿಲ್ಲಾ ವಿಭಾಗಕ್ಕೆ ಇಬ್ಬರನ್ನೂ ಜೋಶಿ ಅವರೇ ಫೈನಲ್ ಮಾಡಲಿದ್ದಾರೆ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಬಿಜೆಪಿ ಪಕ್ಷ ಸೇರಿರುವ ಮಾಜಿ MLC ನಾಗರಾಜ್ ಛಬ್ಬಿ ಸಂತೋಷ್ ಲಾಡ್ ವಿರುದ್ಧ ಸೋತಿದ್ದರು. ನಂತರ ಪಕ್ಷ ಸಂಘಟನೆಗೆ ಜೋಶಿ ಜೊತೆಗೆ ಸಾಥ್ ನೀಡುತ್ತಾ ಬಂದಿದ್ದಾರೆ.ಇದೆ ಹಿನ್ನಲೆಯಲ್ಲಿ ಇದೀಗ ನಾಗರಾಜ್ ಛಬ್ಬಿ ಅವರನ್ನು ಗ್ರಾಮೀಣ ಅಧ್ಯಕ್ಷರನ್ನಾಗಿ ಮಾಡುವತ್ತ ಪ್ರಲ್ಹಾದ ಜೋಶಿ ಒಲವು ತೋರಿಸಿದ್ದು ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಉದಯ ವಾರ್ತೆ ಹುಬ್ಬಳ್ಳಿ