ಉದ್ಯಮಿ ಅಶೋಕ ಬ್ಯಾಹಟ್ಟಿಗೆ ಸ್ಲೋ ಪಾಯಸನ್ ಕೊಟ್ಟು ಮೇರಿ ಸಾಯಿಸಿದ್ದಾರೆ.ಮಗ ಆದಿತ್ಯ ಆರೋಪ.ಕೋಟ್ಯಾಧಿಪತಿ ಸಾವಿನ ಸುತ್ತ ಅನುಮಾನದ ಹುತ್ತ.
ಹುಬ್ಬಳ್ಳಿ:-ಟೀ ಪುಡಿ ಉದ್ಯಮಿ ಅಶೋಕ ಬ್ಯಾಹಟ್ಟಿ ಸಾವಿನ ಹಿಂದೆ ಎರಡನೇ ಪತ್ನಿ ಮೇರಿಯ ಕೈವಾಡವಿದೆ ಎಂದು ಮಗ ಆದಿತ್ಯ ಗಂಭೀರ ಆರೋಪ ಮಾಡಿದ್ದಾರೆ. ನನ್ನ ತಂದೆಯ ಆಸ್ತಿ ಲಪಟಾಯಿಸಬೇಕೆಂದು ಸ್ಲೋ ಪಾಯಿಸನ್ ಕೊಟ್ಟು ಸಾಯಿಸಿದ್ದಾರೆ.ನನ್ನ ತಂದೆಯ ಮ್ರತ ದೇಹ ಅವಳಿಗೆ ಕೊಡುವುದಿಲ್ಲಾ ಎಂದು ಹಠ ಹಿಡಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪತ್ನಿ ಮೇರಿ ನಾನು ಅಶೋಕ ಹದಿನಾರು ವರ್ಷಗಳಿಂದ ಜೀವನ ಮಾಡಿದ್ದೇವೆ.ಆದರೆ ಯಾವುದೇ ಆಸ್ತಿ ಕಬಳಿಸಿಲ್ಲಾ.ಅಶೋಕಗೆ ಕರೋನಾ ಆಗಿತ್ತು.ಅವಾಗಲೇ ಮನೆಯವರು ಬಿಟ್ಟಿದ್ದಾರೆ. ಆದಿತ್ಯ ನನ್ನ ಮನೆಯಲ್ಲಿಯೇ ಬೆಳೆದಿದ್ದಾನೆ ಎಂದಿದ್ದಾಳೆ.
ಉದಯ ವಾರ್ತೆ ಹುಬ್ಬಳ್ಳಿ