ಉದ್ಯೋಗಿಗಳ ಹಿತರಕ್ಷಣೆಗಾಗಿ ಗ್ರ್ಯಾಚೂಟಿ ಬಿಲ್ ತಿದ್ದುಪಡಿ ಮಾಡಲಾಗಿದೆ.ಸಚಿವ ಸಂತೋಷ ಲಾಡ್.
ಧಾರವಾಡ:-ದೇಶದಲ್ಲಿ ಕೇರಳ ಬಿಟ್ಟರೆ ಕರ್ನಾಟಕದಲ್ಲಿ ಗ್ರ್ಯಾಚುಟಿ ಬಿಲ್ಲ್ ಗೆ ಸರಕಾರ ಒಪ್ಪಿಗೆ ಕೊಟ್ಟಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ ಹೇಳಿದ್ದಾರೆ.ಧಾರವಾಡದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಗ್ರ್ಯಾಚೂಟಿ ಕಾನೂನಿಗೆ ತಿದ್ದುಪಡೆ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಉದ್ಯೋಗಿಗಳ ಹಿತರಕ್ಷಣೆಗಾಗಿ ಗ್ರ್ಯಾಚೂಟಿ ಬಿಲ್ ತಿದ್ದುಪಡಿ ಮಾಡಲಾಗಿದೆ.ಕಂಪನಿಗಳು ಉದ್ಯೋಗಿಗಳ ಗ್ರ್ಯಾಚೂಟಿ ಹಣವನ್ನು ಇನ್ಸೂರನ್ಸ್ ಕಂಪನಿಗಳಲ್ಲಿ ತೊಡಗಿಸುವದು ಕಡ್ಡಾಯಗೊಳಿಸಲಾಗಿದೆ.
ಕಂಪನಿ ಮುಚ್ಚಿಹೋದರೆ, ಉದ್ಯೋಗಿ ಕೆಲಸ ಕಳೆದುಕೊಂಡಾಗ ಈ ಕಾನೂನು ಗ್ರ್ಯಾಚೂಟಿ ಹಣ ಮುಳಗದಂತೆ ಕಾಪಾಡುತ್ತದೆ.
ಹತ್ತಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಎಲ್ಲ ಕಂಪನಿಗಳು ಗ್ರ್ಯಾಚೂಟಿ ಇನ್ಸೂರನ್ಸ್ ಮಾಡಿಸುವದು ಕಡ್ಡಾಯಗೊಳಿಸಲಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉದ್ಯೋಗಿಗಳನ್ನು ಹೊರತುಪಡಿಸಿ ಎಲ್ಲ ಕಂಪನಿಗಳೂ ಅರ್ಹ.
ಕೆಲವು ಕಂಪನಿಗಳಲ್ಲಿ ಹಲವಾರು ಕಾರಣಗಳಿಂದ ಗ್ರ್ಯಾಜಿಟಿ ಸಿಗ್ತಾ ಇರಲಿಲ್ಲ.
ಈ ಬಿಲ್ ಅಮೈನ್ಮೆಂಟ್ ನಿಂದ ಉದ್ಯೋಗಿಗೆ ನೇರವಾಗಿ ಇನ್ಶೂರೆನ್ಸ್ ಇಂದ ದುಡ್ಡು ಸಿಗುತ್ತೆ. ಅಂಗೀಕೃತ ಯಾವುದೇ ಇನ್ಶೂರೆನ್ಸ್ ಕಂಪನಿಯಲ್ಲಿ ಗ್ರ್ಯಾಚೂಟಿ ಹಣ ತೊಡಗಿಸಬಹುದು.ಉದ್ಯೋಗಿ ಸಾವನ್ನಪ್ಪಿದರೆ ಕುಟುಂಬಕ್ಕೂ ಕೂಡ ಗ್ರ್ಯಾಚೂಟಿ ಹಣ ಸಿಗಲಿದೆ.ಇದು ದೇಶದಲ್ಲಿ ಕೇರಳ ಬಿಟ್ಟರೆ ಕರ್ನಾಟಕದಲ್ಲಿ ಜಾರಿಯಾಗಿರುವುದು.
ಮುಖ್ಯಮಂತ್ರಿ ಸಲಹೆ ನಂತರ ಎಲ್ಲರ ಒಪ್ಪಿಗೆ ಮೇರೆಗೆ ಜಾರಿಗೆ ತಂದಿರುವಂತದ್ದುಈ ಬಿಲ್ಲ್.
ಕಾನೂನು ಉಲ್ಲಂಘಿಸುವ ಕಂಪನಿಗಳಿಗೆ ದಂಡ ಶಿಕ್ಷೆಗೆ ಒಳಪಡಲಿದ್ದಾರೆ ಎಂದು ಲಾಡ್ ಹೇಳಿದರು.
ಗ್ರ್ಯಾಚ್ಯುಟಿ ಬಿಲ್ಲ್ ಎಂದರೇನು?*
ಇದೊಂದು ಸಾಮಾಜಿಕ ಭದ್ರತಾ ಠೇವಣಿಯಾಗಿದ್ದು, ಉಪಧನ ಕಾಯ್ದೆ ಅಡಿಯಲ್ಲಿ ಬರುವ ಸಂಸ್ಥೆಗಳು ತಮ್ಮ ಉದ್ಯೋಗಿಗಳು ಸೇವಾ ನಿವೃತ್ತಿ ಆದಾಗ ಅಥವಾ ನಿರ್ದಿಷ್ಟ ಅವಧಿಯ ಸೇವೆ ಮುಗಿಸಿ ಮತ್ತೊಂದು ಸಂಸ್ಥೆಗೆ ತೆರಳುವಾಗ ನೀಡುವ ಭದ್ರತಾ ಉಪಧನವಾಗಿದೆ.
*ಈ ಉಪಧನವನ್ನು ವರ್ಷದ 15 ದಿನಗಳ ಸಂಬಳದಂತೆ ಕನಿಷ್ಠ 5 ವರ್ಷ ಸೇವೆ ಪೂರೈಸಿದ ಉದ್ಯೋಗಿಯು ಪಡೆದುಕೊಳ್ಳುತ್ತಾನೆ.*
ಒಂದು ವೇಳೆ ಉದ್ಯೋಗಿಯು ನಿಗದಿತ 5 ವರ್ಷಗಳ ಸೇವಾವಧಿಯೊಳಗೆ ಮೃತ ಪಟ್ಟರೆ, ಅಥವಾ ಸಂಸ್ಥೆಯೇ ಆತನನ್ನು ತೆಗೆದು ಹಾಕಿದರೆ ಸಂಸ್ಥೆಯು ಆತನಿಗೆ ಉಪಧನ ಮೊತ್ತವನ್ನು ನೀಡಬೇಕಿರುತ್ತದೆ.
ಆದರೆ ಈ ಉಪಧನ ನಿಧಿಯ ಬಗ್ಗೆ ಉದ್ಯೋಗಿಗಳಿಗೆ ಸೂಕ್ತ ಮಾಹಿತಿಯ ಕೊರತೆ ಇರುವುದರಿಂದ, ಕೆಲ ಸಂಸ್ಥೆಗಳು ನಷ್ಟದಲ್ಲಿ ಸಿಲುಕುವುದರಿಂದ ಈ ನಿಧಿಯು ಸರಿಯಾಗಿ ಹಂಚಿಕೆ ಆಗುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಉಪಧನ ಕಾಯ್ದೆ 1972ನ್ನು ಕಡ್ಡಾಯವಾಗಿ ಜಾರಿಗೆ ತರಲು ‘ಉಪಧನ ವಿಮಾ ನಿಯಮವನ್ನು’ ಅನುಷ್ಠಾನಕ್ಕೆ ತರಲು ಮುಂದಾಗಿದೆ.
ಈ ಉಪಧನ ನಿಯಮದನ್ವಯ ಸಂಸ್ಥೆಗಳು ತಮ್ಮ ಪ್ರತಿ ಉದ್ಯೋಗಿಯ ಉಪಧನ ಮೊತ್ತವನ್ನು ವಿಮೆಯ ರೂಪದಲ್ಲಿ ಭಾರತೀಯ ಜೀವ ವಿಮಾ ನಿಗಮಕ್ಕೆ ಪಾವತಿಸಬೇಕು. ಒಂದು ವೇಳೆ ಉದ್ಯೋಗಿಯೇ ಮೃತ ಪಟ್ಟರೆ, ಸಂಸ್ಥೆಯೇ ದಿವಾಳಿಯಾದರೆ ಈ ವಿಮೆಯ ಮೂಲಕ ಆ ಉಪನಿಧಿ ಅರ್ಹ ಉದ್ಯೋಗಿಗೆ ದೊರಕುತ್ತದೆ.
ಇದರಿಂದ ಯಾರಿಗೆಲ್ಲ ಅನುಕೂಲವಾಗಲಿದೆ*
ಇದರಿಂದ ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಅನುಕೂಲವಾಗಲಿದೆ.
*ಉಪಧನ ಪಾವತಿ ಕಾಯ್ದೆ 1972 ಏನಿದು*
ಉಪಧನ ಪಾವತಿ ಕಾಯ್ದೆ 1972 ಇದೊಂದು ಸಾಮಾಜಿಕ ಭದ್ರತೆಯ ಕಾಯ್ದೆಯಾಗಿದೆ.
*ಈವರೆಗೆ ಇದರ ಬಗ್ಗೆ ಯಾಕೆ ಬೆಳಕು ಚೆಲ್ಲಲಾಗಿಲ್ಲ*
ಇದರ ತಿಳಿವಳಿಕೆಯ ಕೊರತೆಯಿಂದಾಗಿ ಹಾಗೂ ಇತರೆ ಹಲವು ಸಾಮಾಜಿಕ ಕಾರಣಗಳಿಂದ ಇದರ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಈ ಕಾಯ್ದೆ ಅನ್ವಯ ಕಡ್ಡಾಯವಾಗಿ ಉಪಧನ ವಿಮೆ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಲ್ಲಿ ಲಕ್ಷಾಂತರ ಕಾರ್ಮಿಕರಿಗೆ ಅನುಕೂಲವಾಗಲಿದೆ
*ಈ ಕಾಯ್ದೆ ಎಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರಲಿದೆ*
ಈ ಕಾಯ್ದೆಯನ್ನು ಜಾರಿಗೆ ತಂದಲ್ಲಿ ಉದ್ಯೋಗದಾತರ ಸಂಸ್ಥೆಯು ಯಾವುದೇ ಕಾರಣದಿಂದ ಮುಚ್ಚಿದಲ್ಲಿ, ಆರ್ಥಿಕವಾಗಿ ನಷ್ಟ ಅನುಭವಿಸಿದರೆ ಅಥವಾ ಇನ್ಯಾವುದೇ ಕಾರಣದಿಂದ ದಿವಾಳಿಯಾದರೆ ಕಾರ್ಮಿಕರ ಉಪಧನವನ್ನು ಸುರಕ್ಷಿತವಾಗಿಸಲು ಅನುಕೂಲವಾಗಲಿದೆ.
*ರಾಜ್ಯ ಸರ್ಕಾರ ಏನೇನು ಕ್ರಮ ಕೈಗೊಳ್ಳಲಿದೆ*
ಈ ಕಾಯ್ದೆಯಡಿ ಬರುವ ಸಂಸ್ಥೆಗಳು ಉಪಧನದ ಬಾಧ್ಯತೆಯನ್ನು ವಹಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ನೀತಿಯೊಂದನ್ನು ರೂಪಿಸುತ್ತಿದೆ.
ಇತರೆ ಸಾಮಾಜಿಕ ಭದ್ರತಾ ಯೋಜನೆಗಳಿಗಿಂತ ಭಿನ್ನವೇ
ಹೌದು ಇದು ಇತರೆ ಸಾಮಾಜಿಕ ಭದ್ರತಾ ಯೋಜನೆಗಳಿಗಿಂತ ಭಿನ್ನವೇ. ರಾಜ್ಯದ ಶ್ರಮಿಕರಿಗೆ ಸರ್ಕಾರವು ಹಲವಾರು ಯೋಜನೆ, ಸಾಮಾಜಿಕ ಸೇವಾ ಸೌಲಭ್ಯಗಳನ್ನು ನೀಡುತ್ತಿದ್ದು ಈ ಉಪಧನ ಕಾಯ್ದೆಯಿಂದಲೂ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸಾಕಷ್ಟು ನೆರವಾಗಲಿದೆ.
ಉದಯ ವಾರ್ತೆ ಧಾರವಾಡ