ಮೋದಿ ಮತ್ತೊಮ್ಮೆ ಪಿಎಂ.ಜೋಶಿ ಮತ್ತೆ ಎಂಪಿ ಪೂಜೆ ಸಲ್ಲಿಸಿದ ಹುಬ್ಬಳ್ಳಿ ಬಿಜೆಪಿಗರು.ಕೇರಳದ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಜ್ಯೂಸ್ ವಿತರಿಸಿದ ಯುವ ಮುಖಂಡ ಅನೂಪ ಬಿಜವಾಡ ಆ್ಯಂಡ್ ಟೀಮ್.
ಹುಬ್ಬಳ್ಳಿ:-ಕೇರಳ ರಾಜ್ಯದಲ್ಲಿರುವ ಅಯ್ಯಪ್ಪ ಸ್ವಾಮಿಗೆ ಭಕ್ತರು ತಮ್ಮ ಆಸೆ ಈಡೇರಲು ತಿಂಗಳುಗಟ್ಟಲೆ ವ್ರತ ಮಾಡಿ ಅಯ್ಯಪ್ಪ ಸ್ವಾಮಿಗೆ ತೆರಳಿ ಪೂಜೆ ಸಲ್ಲಿಸಿ ಸಂಕ್ರಮಣದ ದಿವಸ ಮಕರ ಜ್ಯೋತಿ ನೋಡಿಕೊಂಡು ವಾಪಸ್ಸಾಗತಾರೆ.
ಆದರೆ ಹುಬ್ಬಳ್ಳಿಯ ಬಿಜೆಪಿ ಯುವ ಮುಖಂಡ ಅನೂಪ ಬಿಜವಾಡ ಆ್ಯಂಡ್ ಟೀಮ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿ ಹಾಗೇ ಪ್ರಲ್ಹಾದ ಜೋಶಿ ಸಂಸದರಾಗಿ ಆಯ್ಕೆಯಾಗಲಿ ಎಂದು ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಒಂದು ದಿನ ಭಕ್ತಾದಿಗಳಿಗೆ ಜ್ಯೂಸ್ ಹಂಚಿದ್ದಾರೆ.
ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನರೇಂದ್ರ ಮೋದಿ ಮತ್ತು ಪ್ರಲ್ಹಾದ ಜೋಶಿ ಅವರ ಭಾವ ಚಿತ್ರದೊಂದಿಗೆ ಪೂಜೆ ಸಲ್ಲಿಸಿ ಜ್ಯೂಸ್ ಹಂಚಿದ ಯುವ ನಾಯಕ ಅನೂಪ.ಬಿಜವಾಡ ದೇಶದ ಅಭಿವೃದ್ಧಿ ದ್ರಷ್ಡಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ದೇಶಕ್ಕೆ ಪ್ರಧಾನಿ ಆಗಲೇ ಬೇಕು ಹಾಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಜನರ ಕೈಗೇ ನೇರವಾಗಿ ಜನರ ಕೈಗೆ ಸಿಗುವ ಅಭಿವ್ರದ್ದಿಯ ಹರಿಕಾರ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರಂತಹ ನಾಯಕ ನಮಗೆ ಬೇಕು ಅವರು ಮತ್ತೊಮ್ಮೆ ಸಂಸದರಾಗಿ ಸಚಿವರಾಗಬೇಕೆಂಬ ಆಸೆಯಿಂದ ಪೂಜೆ ಸಲ್ಲಿಸಿ ಜ್ಯೂಸ್ ಹಂಚಿರುವುದಾಗಿ ತಿಳಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ