ನಮ್ಮೂರ ದೇವಸ್ಥಾನ ಶುಭ್ರಗೊಳಿಸಿ ಶ್ರೀರಾಮನನ್ನು ಸ್ವಾಗತಿಸೋಣ: ಪ್ರಹ್ಲಾದ ಜೋಶಿ ಕರೆ.

Share to all

ನಮ್ಮೂರ ದೇವಸ್ಥಾನ ಶುಭ್ರಗೊಳಿಸಿ ಶ್ರೀರಾಮನನ್ನು ಸ್ವಾಗತಿಸೋಣ: ಪ್ರಹ್ಲಾದ ಜೋಶಿ ಕರೆ.

ಹುಬ್ಬಳ್ಳಿ:-ನಮ್ಮೂರ ದೇವಸ್ಥಾನ ಶುಭ್ರಗೊಳಿಸಿ ಮರ್ಯಾದಾ ಪುರುಷೋತ್ತಮ, ಪ್ರಭು ಶ್ರೀ ರಾಮನ ಸ್ವಾಗತಕ್ಕೆ ಸಿದ್ಧರಾಗೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ, ಉದ್ಘಾಟನೆ, ಪ್ರಾಣ ಪ್ರತಿಷ್ಥಾಪನೆಯ ಭಾರತೀಯರ
ಶತಮಾನಗಳ ಕನಸು, ತಪಸ್ಸು ಇದೇ ಜನವರಿ 22ರಂದು ನನಸಾಗಲಿದೆ. ಇದರ ಅಂಗವಾಗಿ ನಮ್ಮೂರ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ರಾಮನ ಆಗಮನಕ್ಕೆ ಸಿದ್ಧರಾಗುವ ಮಹತ್ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ ಎಂದರು.

ಸ್ವಚ್ಛತೀರ್ಥ ಅಭಿಯಾನದಲ್ಲಿ ಸರ್ವರೂ ಭಾಗಿಯಾಗೋಣ ಎಂದು ಕರೆ ನೀಡಿದ ಜೋಶಿ, ಹುಬ್ಬಳ್ಳಿಯ ಸಾಯಿ ನಗರ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಜ್ಜ ಮೂಲ ಗದ್ದುಗೆ ಮಠದ ಆವರಣದಲ್ಲಿ ಸ್ವಚ್ಛಗೊಳಿಸಿದರು.

ಶಾಸಕ ಮಹೇಶ್ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶ್ ಕೌಜಗೇರಿ, ಸಂತೋಷ್ ಚವಾಣ್, ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಸಚಿವರಿಗೆ ಸಾಥ್ ನೀಡಿದರು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author